ನ.18ರಿಂದ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ

Update: 2023-11-16 14:38 GMT

ಮಂಗಳೂರು: ಭಾರತ ಚುನಾವಣೆ ಆಯೋಗದ ನಿರ್ದೇಶನದಂತೆ‘‘ಮಿಂಚಿನ ನೋಂದಣಿ’’ ಕಾರ್ಯಕ್ರಮವು ನವೆಂಬರ 18 ಮತ್ತು 19ರಂದು ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ನಡೆಯಲಿದೆ.

ಈ ಎರಡು ದಿನಗಳಲ್ಲಿ ಎಲ್ಲಾ ಬೂತು ಮಟದಅಧಿಕಾರಿಯವರು ಹಾಗೂ ಬಿಎಲ್‌ಒ ಮೇಲ್ವಿಚಾರಕರು ಬೆಳಗ್ಗೆ 10 ಗಂಟೆ ಯಿಂದ ಸಾಯಂಕಾಲ 5 ಗಂಟೆಯವರೆಗೆ ಮತಗಟ್ಟೆಯಲ್ಲಿ ಉಪಸ್ಥಿತರಿರುವರು. ಸಾರ್ವಜನಿಕರ ಹೆಸರು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲ್ಪಟ್ಟಿದೆಯೇ ಎಂದು ಪರಿಶೀಲಿಸುವುದು, ಅರ್ಹ ಮತದಾರರಿಂದ ಹೊಸದಾಗಿ ಹೆಸರು ಸೇರ್ಪಡೆಗೆ ನಮೂನೆ-6 ಪಡೆದುಕೊಳ್ಳುವುದು, ವಲಸೆಹೋದ, ಮೃತಪಟ್ಟ, ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕುವ ಬಗ್ಗೆ ನಮೂನೆ-7 ಸ್ವೀಕರಿಸುವುದು ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ಹಾಗೂ ಇತರೆ ಯಾವುದಾದರು ತಿದ್ದುಪಡಿ ಅಗತ್ಯವಿದ್ದಲ್ಲಿ ನಮೂನೆ-8 ಸ್ವೀಕರಿಸಲಾಗುವುದು.

ಸಾರ್ವಜನಿಕರು ಈ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ದಕ್ಷಿಣಕನ್ನಡ ಜಿಲ್ಲಾ ಚುನಾ ವಣಾಧಿಕಾರಿಗಳ ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News