ಮೂತ್ರಕೋಶ ಕ್ಯಾನ್ಸರ್‌ಗೆ ವರದಾನವಾದ ಎಸ್‌ಆರ್‌ಟಿ ಚಿಕಿತ್ಸೆ
ಮಂಗಳೂರು: ಇಲ್ಲಿನ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿಯ ವಿಶೇಷ ತಜ್ಞರ ತಂಡ ಸ್ಟೀರಿಯೋಟ್ಯಾಕ್ಟಿಕ್ ರೇಡಿಯೋ ಥೆರಪಿ (ಎಸ್‌ಆರ್‌ಟಿ) ತಂತ್ರಜ್ಞಾನವನ್ನು ಬಳಸಿಕೊಂಡು ಮೂತ್ರಕೋಶದ ಕ್ಯಾನ್ಸರ್‌ಗೆ ಯಶಸ್ವೀ ಚಿಕಿತ್ಸೆಯನ್ನು ನಡೆಸುವ ಮೂಲಕ ಗಮನಾರ್ಹ ಸಾಧನೆಯನ್ನು ಮಾಡಿದೆ.
ಕ್ಲಿನಿಕಲ್ ಹಾಗೂ ಆಡಳಿತ ವಿಭಾಗದ ನಿದೇರ್ಶಕರು ಹಾಗೂ ರೇಡಿಯೇಷನ್ ಅಂಕಾಲಜಿ ವಿಭಾಗದ ಹಿರಿಯ ತಜ್ಞ ಡಾ.ಸುರೇಶ್ ರಾವ್ ಅವರ ಮಾರ್ಗದರ್ಶನದಲ್ಲಿ ಕಳೆದ ಒಂದು ದಶಕದ ಅವಧಿಯಲ್ಲಿ ಮೂತ್ರಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಅನೇಕ ಮಂದಿ ರೋಗಿಗಳಿಗೆ ಎಸ್‌ಆರ್‌ಟಿ ಚಿಕಿತ್ಸೆಯನ್ನು ನೀಡಿದ್ದಾರೆ. ಡಾ.ವೆಂಕಟರಮಣ ಕಿಣಿ, ಡಾ.ಸನತ್ ಹೆಗಡೆ, ಡಾ.ಕೃಷ್ಣ ಪ್ರಸಾದ್, ಡಾ.ಹೇಮಂತ್ ಕುಮಾರ್, ಡಾ.ಜಲಾಲುದ್ದಿನ್ ಅಕ್ಬರ್, ಡಾ.ರೋಹನ್ ಗಟ್ಟಿ, ಡಾ.ರಿತಿ ಡಿ‘ಸಿಲ್ವಾ ಮತ್ತು ಡಾ.ವಿಶ್ವಪ್ರಿಯಾ ಅವರನ್ನು ಒಳಗೊಂಡ ವಿಶೇಷ ತಜ್ಞರ ತಂಡ ಈ ಸಾಧನೆಯನ್ನು ಮಾಡಿದ್ದು ರೋಗಿಗಳಿಗೆ ವಿಶೇಷ ಆರೈಕೆ ನೀಡಿ ಅವರು ಸಂಪೂರ್ಣ ಗುಣಮುಖರಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್‌ಆರ್‌ಟಿ ಚಿಕಿತ್ಸೆಯನ್ನು ಪಡೆದವರಲ್ಲಿ ವೈದ್ಯಕೀಯ ಶಸ್ತ್ರಚಿಕಿತ್ಸೆ ನಡೆಸಲಾಗದೆ ಇರುವ ಹಿರಿಯ ನಾಗರಿಕರು ಹಾಗೂ ಸಂಪೂರ್ಣ ಸಿಸೆಕ್ಟಮಿ (ಶಸ್ತ್ರಚಿಕಿತ್ಸೆಯ ಮೂಲಕ ಮೂತ್ರಕೋಶವನ್ನು ತೆಗೆಯುವ) ಮತ್ತು ಹೊಸ ಮೂತ್ರಕೋಶ ಅಳವಡಿಕೆ (ರೋಗಿಯ ಕರುಳನ್ನು ಬಳಸಿಕೊಂಡು ಹೊಸ ಮೂತ್ರಕೋಶದ ಸೃಷ್ಟಿ) ಪ್ರಕ್ರಿಯೆಯನ್ನು ಬಯಸದ ಯುವ ರೋಗಿಗಳು ಕೂಡ ಸೇರಿರುವುದು ವಿಶೇಷ.
ಈ ವಿಶೇಷ ವೈದ್ಯರ ತಂಡ ಸಾಧಿಸಿರುವ ಇನ್ನೊಂದು ಗಮನಾರ್ಹ ಸಂಗತಿ ಎಂದರೆ, ಎಂಭತ್ತೇಳು ವರ್ಷ ವಯಸ್ಸಿನ ಹಿರಿಯರು ಈ ಎಸ್‌ಆರ್‌ಟಿ ಚಿಕಿತ್ಸೆಗೆ ಒಳಗಾಗಿರುವುದು. ಈ ಚಿಕಿತ್ಸೆ ಅತ್ಯಂತ ಪರಿಣಾಮಕಾರಿಯಾಗಿದ್ದು ಆ ಹಿರಿಯ ಜೀವ ಎಲ್ಲರಂತೆ ಸುಗಮನ ಜೀವನ ನಡೆಸುತ್ತಿದ್ದಾರೆ. ಚಿಕಿತ್ಸೆ ನಡೆದು ಮೂರು ವ?ಗಳ ಬಳಿಕವೂ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಅವರು ಆರೋಗ್ಯಪೂರ್ಣ ಜೀವನ ನಡೆಸುತ್ತಿರುವುದು ಇನ್ನೊಂದು ಹೆಗ್ಗಳಿಕೆ.
ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿಯ ತಜ್ಞರ ತಂಡ ಎಸ್‌ಆರ್‌ಟಿ ಚಿಕಿತ್ಸೆ ಎ? ಪರಿಣಾಮಕಾರಿ ಎಂಬುದನ್ನು ಸಾಬೀತುಮಾಡುವಲ್ಲಿ ಮೇಲುಗೈ ಸಾಧಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಇ?ಪಡದ ರೋಗಿಗಳ ಪಾಲಿಗೆ ಇದು ವರದಾನವಾಗಿದೆ. ಆಸ್ಪತ್ರೆಯ ಬಹು-ಅಧ್ಯಯನ ವಿಭಾಗದ ತಜ್ಞರು ನಡೆಸಿದ ಪ್ರಯತ್ನ ಮೆಚ್ಚುಗೆಗೆ ಪಾತ್ರವಾಗಿದೆ. ಪರಿಪೂರ್ಣ
ಫಲಿತಾಂಶ ಲಭ್ಯವಾಗಿರುವುದು ಕೂಡ ರೋಗಿಗಳ ನೆಮ್ಮದಿಗೆ ಕಾರಣವಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ. ಸಂಪರ್ಕ ಸಂಖ್ಯೆ0824 4249999 ಅಥವಾ 0824-2244999 ಹೆಲ್ಫ್‌ಲೈನ್ 8050636777