ಸುಳ್ಯ: ಕಂಟೈನರ್ ಲಾರಿ ಢಿಕ್ಕಿ; ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಮೃತ್ಯು

Update: 2024-12-24 17:02 GMT

ಸುಳ್ಯ: ಸಂಪಾಜೆ ಸಮೀಪದ ಕೊಯನಾಡಿನ ಚೆಡಾವು ಬಳಿ ದ್ವಿಚಕ್ರ ವಾಹನವೊಂದಕ್ಕೆ ಕಂಟೈನರ್ ಲಾರಿ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲಿದ್ದ ದಂಪತಿ ಸವಾರರಿಬ್ಬರು ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ.

ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಂಟೈನರ್ ಹಾಗೂ ಸಿದ್ಧಾಪುರದಿಂದ ಸುಳ್ಯ ಮೂಲಕ ಪುತ್ತೂರಿಗೆ ಹೋಗು ತ್ತಿದ್ದ ದ್ವಿಚಕ್ರ ವಾಹನಕ್ಕೆ ಸಂಪಾಜೆ ಕೊಯನಾಡಿನ ಚೆಡಾವು ಬಳಿ ಮುಖಾಮುಖಿ ಢಿಕ್ಕಿಯಾಗಿದೆ. ಅಪಘಾತದ ಭೀಕರತೆಗೆ ದ್ವಿಚಕ್ರ ವಾಹನ ಸವಾರ ಮೂಲತ: ಪುತ್ತೂರಿನ, ಕೊಡಗು ಜಿಲ್ಲೆಯ ಸಿದ್ಧಾಪುರದ ನೆಲ್ಲಿಹುದಿಕೇರಿಯಲ್ಲಿ ನೆಲೆಸಿದ್ದ ಎಂ. ಚಿದಾನಂದ ಆಚಾರ್ಯ (48) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ಸಹ ಸವಾರೆ ಚಿದಾನಂದ ಆಚಾರ್ಯ ಅವರ ಪತ್ನಿ ನಳಿನ (39) ಗಂಭೀರ ಗಾಯಗೊಂಡಿದ್ದರು. ಅಂಬ್ಯುಲೆನ್ಸ್ ಮೂಲಕ ಸ್ಥಳೀಯರು ಸೇರಿ ಸುಳ್ಯದ ಆಸ್ಪತ್ರೆಗೆ ದಾಖಲಿಸಿದರು. ಆ ವೇಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೇ ಮೃತಪಟ್ಟಿದ್ದಾರೆ.

ಚಿದಾನಂದ ಆಚಾರ್ಯ ದಂಪತಿ ಚಿನ್ನದ ಕೆಲಸ ಮಾಡಿಕೊಂಡು ಕೊಡಗಿನ ಸಿದ್ಧಾಪುರದ ನೆಲ್ಲಿಹುದಿಕೇರಿಯಲ್ಲಿ ನೆಲೆಸಿದ್ದರು. ಜೊತೆಗೆ ಮಗ ಕೂಡ ಒಟ್ಟಿಗೆ ನೆಲೆಸಿದ್ದರು. ಮಂಗಳವಾರ ಪುತ್ತೂರಿನಲ್ಲಿ ಕಾರ್ಯಕ್ರಮ ಇರುವ ಹಿನ್ನಲೆಯಲ್ಲಿ ತನ್ನ ಮಗ ನನ್ನು ಸಿದ್ಧಾಪುರದಿಂದ ಬಸ್ಸಿನಲ್ಲಿ ಕಳಿಸಿ ದಂಪತಿ ತಮ್ಮ ಸ್ಕೂಟಿಯಲ್ಲಿ ಪ್ರಯಾಣಿಸಿದ್ದರು. ಆದರೆ ಸಂಪಾಜೆಯ ಚೆಡಾವು ಎಂಬಲ್ಲಿಗೆ ತಲುಪಿದಾಗ ಕಂಟೈನರ್ ಲಾರಿ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಸ್ಕೂಟಿಗೆ ಢಿಕ್ಕಿ ಹೊಡೆದಿರುವುದಾಗಿ ತಿಳಿದುಬಂದಿದೆ.

ಸ್ಥಳಕ್ಕೆ ಸಂಪಾಜೆ ಪೊಲೀಸರು ಆಗಮಿಸಿ ಸ್ಥಳಪರಿಶೀಲನೆ ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News