ಯುವಕ ನಾಪತ್ತೆ

Update: 2024-09-26 15:41 GMT

ಮಂಗಳೂರು: ನಗರದ ಭೀಮ ಜ್ಯುವೆಲ್ಲರ್ಸ್‌ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದ ಭಟ್ಕಳ ನಿವಾಸಿ ರಿತೇಶ್ ರಾಮಚಂದ್ರ ಶೆಟ್ಟಿ (26) ಸೆ.19ರಂದು ಬೆಳಗ್ಗೆ 9:30ಕ್ಕೆ ಕದ್ರಿ ದೇವಸ್ಥಾನ ಸಮೀಪದ ಪಿಜಿಯಿಂದ ಕೆಲಸಕ್ಕೆಂದು ಹೋದವರು ನಾಪತ್ತೆಯಾಗಿ ದ್ದಾರೆ ಎಂದು ಕದ್ರಿ ಠಾಣೆಗೆ ದೂರು ನೀಡಲಾಗಿದೆ.

6 ಅಡಿ ಎತ್ತರದ, ಗೋಧಿ ಮೈಬಣ್ಣದ, ರಾಮಚಂದ್ರ ಶೆಟ್ಟಿ ಗ್ರೇ ಕಲರ್ ಪ್ಯಾಂಟ್, ಕ್ರೀಮ್ ಕಲರ್ ಲೈನಿಂಗ್ ಶರ್ಟ್ ಧರಿಸಿ ದ್ದರು. ಇವರ ಬಗ್ಗೆ ಮಾಹಿತಿ ಸಿಕ್ಕಿದವರು ದೂ.ಸಂ: 0824-2220520ನ್ನು ಸಂಪರ್ಕಿಸಬಹುದು ಎಂದು ಕದ್ರಿ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News