ಉಡುಪಿಯ ಕಾಲೇಜು ಪ್ರಕರಣ: ಸುಳ್ಳು ಪ್ರಚಾರಕ್ಕೆ ಯುನಿವೆಫ್ ಕರ್ನಾಟಕ ಖಂಡನೆ
ಮಂಗಳೂರು, ಜು.27: ತಮಾಷೆಗಾಗಿ ಕಾಲೇಜು ವಿದ್ಯಾರ್ಥಿನಿಯರು ಮಾಡಿದ್ದಾರೆ ಎನ್ನಲಾದ ವೀಡಿಯೋ ಚಿತ್ರೀಕರಣವನ್ನು ನೆಪವಾಗಿಟ್ಟುಕೊಂಡು ರಾಜ್ಯದ ಕೆಲವು ಕಡೆಗಳಲ್ಲಿ ನಡೆಸಲಾಗುತ್ತಿರುವ ಪ್ರತಿಭಟನೆಗಳು ಖಂಡನೀಯವಾಗಿದೆ ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೊಬೈಲ್‌ನಲ್ಲಿ ಯಾವುದೇ ಚಿತ್ರೀಕರಣ ಮಾಡಿಲ್ಲ, ಮೊಬೈಲ್‌ನಲ್ಲಿ ಅಂತಹ ಚಿತ್ರೀಕರಣ ಶೇಖರಣೆಯಾಗಿಲ್ಲ, ಯಾವುದೇ ವೀಡಿಯೋ ವೈರಲ್ ಆಗಿಲ್ಲವೆಂದೂ ವಿದ್ಯಾರ್ಥಿನಿಯರಿಗೆ ಯಾವುದೇ ದುರುದ್ದೇಶ ಇರಲಿಲ್ಲವೆಂದು ಉಡುಪಿ ಎಸ್ಪಿ ಮತ್ತು ಕಾಲೇಜಿನ ಆಡಳಿತ ವರ್ಗವು ಸ್ಪಷ್ಟವಾಗಿ ತಿಳಿಸಿದ ನಂತರವೂ ಇಂತಹ ಪ್ರತಿಭಟನೆಯ ಹಿಂದಿರುವ ಉದ್ದೇಶವನ್ನು ಜನತೆ ಅರ್ಥ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿನಿಯರ ಬದುಕನ್ನು ಹಾಳುಗೆಡಹುವ ಈ ಕೃತ್ಯವನ್ನು, ರಾಜ್ಯ ಸರಕಾರವು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಮತ್ತು ಕಾನೂನು ಕೈಗತ್ತಿಕೊಳ್ಳುವವರನ್ನು ಶಿಕ್ಷೆಗೊಳಪಡಿಸಬೇಕು ಎಂದಯ ಆಗ್ರಹಿಸಿದ್ದಾರೆ.