ಉಳ್ಳಾಲ: ವಾಣಿ ಆಳ್ವರಿಗೆ ನಗರ ಸಭೆ ವತಿಯಿಂದ ಬೀಳ್ಕೊಡುಗೆ

Update: 2024-09-03 08:41 GMT

ಉಳ್ಳಾಲ: ನಗರಸಭೆ ಯಲ್ಲಿ ಒಂದು ವರ್ಷ ಪ್ರಭಾರ ಪೌರಾಯುಕ್ತ ಆಗಿ ಕೆಲಸ ಮಾಡಿದೆ. ಈ ಸಂದರ್ಭದಲ್ಲಿ ಎಲ್ಲರ ಸಹಕಾರ ಇದ್ದ ಕಾರಣ ಕೆಲಸ ಮಾಡಲು ಸುಲಭವಾಯಿತು. ಸ್ವಚ್ಛ ಉಳ್ಳಾಲ ನಿರ್ಮಾಣ ಆಗಲು ಪೌರ ಕಾರ್ಮಿಕರು ಕಾರಣರಾಗಿದ್ದಾರೆ ಹೊರತು ನಾನಲ್ಲ ಎಂದು ನಗರಸಭೆ ಪ್ರಭಾರ ಪೌರಾಯುಕ್ತ ಆಗಿದ್ದ ವಾಣಿ ಆಳ್ವ ಹೇಳಿದರು.

ವರ್ಗಾವಣೆ ನಿಮಿತ್ತ ಉಳ್ಳಾಲ ನಗರ ಸಭೆ ಸಭಾಂಗಣದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ನಗರ ಸಭೆ ಪ್ರಭಾರ ಪೌರಾಯುಕ್ತ ಆಗಿ ಅಧಿಕಾರ ಸ್ವೀಕಾರ ಮಾಡಿದ ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮತಡಿ ಅವರು ಮಾತನಾಡಿ, ಜಿಲ್ಲಾಧಿಕಾರಿ ಆದೇಶ ಮೇರೆಗೆ ನಾನು ನಗರ ಸಭೆ ಪೌರಾಯುಕ್ತ ಆಗಿ ಜವಾಬ್ದಾರಿ ವಹಿಸಿದ್ದೇನೆ. ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡಲು ಎಲ್ಲಾ ರೀತಿ ಸಹಕಾರ ಬೇಕು ಎಂದರು.

ಈ ಸಂದರ್ಭದಲ್ಲಿ ವರ್ಗಾವಣೆಗೊಂಡ ವಾಣಿ ಆಳ್ವ ಅವರಿಗೆ ಉಳ್ಳಾಲ ನಗರ ಸಭೆ ವತಿಯಿಂದ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ನಗರ ಸಭೆ ಕಿರಿಯ ಅಭಿಯಂತರರಾದ ತುಳಸಿದಾಸ್, ಕಂದಾಯ ನಿರೀಕ್ಷಕ ಚಂದ್ರ ಹಾಸ್, ಕಂದಾಯ ಅಧಿಕಾರಿ ನವೀನ್ ಹೆಗ್ದೆ, ಲೆಕ್ಕಾಧಿಕಾರಿ ವಾಸು, ಲೆಕ್ಕಾಧೀಕ್ಷಕ ಬಿಂದ್ಯಾ, ಮೆನೇಜರ್ ಜಯಶೀಲ, ಕೌನ್ಸಿಲರ್ ಮುಸ್ತಾಕ್ ಪಟ್ಲ, ಖಲೀಲ್, ನಗರಸಭೆ ಸಿಬ್ಬಂದಿ ವರ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಿಬ್ಬಂದಿ ರೂಪಮ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News