ಎರಡನೇ ಅವಧಿಗೆ ನೇಮಕಗೊಳ್ಳದ ಉಳ್ಳಾಲ ನಗರ ಸಭೆ ಆಡಳಿತ ಸಮಿತಿ

Update: 2023-09-19 12:19 GMT

ಉಳ್ಳಾಲ: ಇಲ್ಲಿನ ನಗರ ಸಭೆ ಮೊದಲ ಅವಧಿಯ ಆಡಳಿತ ಸಮಿತಿ ಅಧಿಕಾರಾವಧಿ ಮುಗಿದು ತಿಂಗಳು ನಾಲ್ಕು ಕಳೆದರೂ ಮೀಸಲಾತಿ ಪ್ರಕಟ ವಾಗದ ಹಿನ್ನೆಲೆಯಲ್ಲಿ ಎರಡನೇ ಅವಧಿಗೆ ಆಡಳಿತ ಸಮಿತಿ ನೇಮಕ ಆಗದೆ ಕಾರ್ಯ ಚಟುವಟಿಕೆ ಸ್ಥಗಿತಗೊಂಡಿದೆ.

ಆಡಳಿತಾಧಿಕಾರಿಗಳು ಕೈಯಲ್ಲಿ ಆಡಳಿತ ಇರುವುದರಿಂದ ವಾರ್ಡ್ ಕೌನ್ಸಿಲರ್ ಗಳು ಅಭಿವೃದ್ಧಿ ಕಾರ್ಯ ಆಸಕ್ತಿ ವಹಿಸದೇ ಮೌನ ಆಗಿದ್ದು, ಇದರಿಂದ ಚರಂಡಿ ಸೋರಿಕೆ, ಕೊಳಚೆ ನೀರು, ಯುಜಿಡಿ ಸಮಸ್ಯೆ ಮುಂದುವರಿದಿದೆ. ಈ ಬಗ್ಗೆ ಆಯಾ ವಾರ್ಡ್ ಕೌನ್ಸಿಲರ್ ಗಳಲ್ಲಿ ವಿಚಾರಿಸಿದರೆ ಆಡಳಿತ ಸಮಿತಿ ಇಲ್ಲದೇ ಏನು ಮಾಡಲಾಗದು ಎಂಬ ದಿಟ್ಟ ಉತ್ತರ ಕೂಡಾ ಸಿಗುತ್ತದೆ.

ಉಳ್ಳಾಲ ನಗರ ಸಭೆಗೆ 2018 ಆಗಸ್ಟ್ 31 ರಂದು ಚುನಾವಣೆ ನಡೆದಿತ್ತು. ಇದರ ಬಳಿಕ ಪ್ರಕಟಗೊಂಡಿದ್ದ ಮೀಸಲಾತಿ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದ ಹಿನ್ನೆಲೆಯಲ್ಲಿ ನಗರ ಸಭೆಗೆ ಎರಡು ವರ್ಷ ಗಳ ಕಾಲ ಆಡಳಿತಾಧಿಕಾರಿಗಳ ನೇಮಕ ಆಗಿತ್ತು. ನ್ಯಾಯಾಲಯ ದಲ್ಲಿ ಈ ಸಮಸ್ಯೆ ಇತ್ಯರ್ಥ ಗೊಂಡ ಬಳಿಕ 2020 ಡಿಸೆಂಬರ್ ನಲ್ಲಿ ನಗರ ಸಭೆ ಗೆ ಮೀಸಲಾತಿ ಪ್ರಕಟ ಗೊಂಡು ಮೊದಲ ಹಂತದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆದಿತ್ತು.

ಈ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಚಿತ್ರ ಕಲಾ ಹಾಗೂ ಉಪಾಧ್ಯಕ್ಷ ರಾಗಿ ಅಯ್ಯೂಬ್ ಆಯ್ಕೆ ಆಗಿದ್ದರು. ಇವರ ಅಧಿಕಾರಾವಧಿ 2023ಮೇ 4ಕ್ಕೆ ಕೊನೆಗೊಂಡಿತ್ತು. ಇದರ ಬಳಿಕ ಅಧ್ಯಕ್ಷ ಗಾದಿ ಗೆ ಹಲವು ಕೌನ್ಸಿಲರ್ ಗಳು ಕಟಕಟೆಯಲ್ಲಿ ನಿಂತು ಮೀಸಲಾತಿ ಯಾವುದು ಬರುತ್ತದೆ ಎಂದು ಕುತೂಹಲ ಭರಿತ ವಾಗಿ ಎದುರು ನೋಡಲಾರಂಭಿಸಿದ್ದಾರೆ.

ಅಧ್ಯಕ್ಷ, ಉಪಾಧ್ಯಕ್ಷ ಅವಧಿ ಮುಗಿದು ತಿಂಗಳು ನಾಲ್ಕು ಕಳೆದರೂ ಈವರೆಗೂ ಮೀಸಲಾತಿ ಪ್ರಕಟ ಗೊಂಡಿಲ್ಲ.ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಯದೇ ಆಡಳಿತಾಧಿಕಾರಿಗಳ ಕೈಯಲ್ಲೇ ನಗರ ಸಭೆ ಕಾರ್ಯ ಚಟುವಟಿಕೆ ನಡೆಯುತ್ತಿರುವುದರಿಂದ ಅಭಿವೃದ್ಧಿ ಹಿನ್ನೆಡೆ ಆಗುತ್ತಿದೆ. ನಗರ ಸಭೆ ಗೆ ನೇಮಕಗೊಂಡ ಕೌನ್ಸಿಲರ್ ಗಳು ಈಗ ಉತ್ಸುಕರಾಗಿ ಕಾರ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿರುವುದರಿಂದ ಜನರ ಅಗತ್ಯ ಕೆಲಸಗಳು ಆಗದೇ ನಿರಾಸೆ ಯಿಂದ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ಕೂಡ ಸ್ಥಳೀಯರಿಂದ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ಆಡಳಿತ ಸಮಿತಿ ಇಲ್ಲದೇ ಬಹಳಷ್ಟು ಕಡೆ ಅಭಿವೃದ್ಧಿ ಕಾರ್ಯ ಗಳು ನೆನೆಗುದಿಗೆ ಬಿದ್ದಿದೆ. ಕೆಲವು ಕಡೆ ಆಗಿರುವ ಚರಂಡಿ ಕಳಪೆ ಕಾಮಗಾರಿ ಯಿಂದ ಸೋರಿಕೆ ಆಗುತ್ತಿದ್ದರೂ ಪರಿಹಾರ ವ್ಯವಸ್ಥೆ ಆಗುತ್ತಿಲ್ಲ ಎಂಬ ಆಪಾದನೆ ಗಳು ಕೇಳಿ ಬಂದಿವೆ. ಒಟ್ಟಿನಲ್ಲಿ ಮೀಸಲಾತಿ ಯಾವಾಗ ಬರಬಹುದು ಎಂಬ ಒಂದೇ ಪ್ರಶ್ನೆ ಕೌನ್ಸಿಲರಗಳದ್ದಾಗಿದೆ. ಆಡಳಿತ ಸಮಿತಿ ಇಲ್ಲದ ಕಾರಣ ಸಮಸ್ಯೆ ಯಾರ ಬಳಿ ಹೇಳಬೇಕು ಎಂಬುದು ಸ್ಥಳೀಯ ನಾಗರಿಕರ ಪ್ರಶ್ನೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News