ಮಂಗಳೂರು ಸೆಂಟ್ರಲ್ - ಮಡಗಾಂವ್ ಜಂಕ್ಷನ್ ರೈಲು ಸಂಚಾರದಲ್ಲಿ ವ್ಯತ್ಯಯ

Variation in Mangalore Central - Madgaon Junction train traffic

Update: 2023-09-03 13:29 GMT

File Photo 

ಮಂಗಳೂರು: ಮಂಗಳೂರು ಸೆಂಟ್ರಲ್ - ಮಡಗಾಂವ್ ಜಂಕ್ಷನ್ MEMU ಎಕ್ಸ್‌ಪ್ರೆಸ್ (ರೈಲು ನಂ. 10108) ಸಂಚಾರವನ್ನು ಸೆ.7ರಂದು ಮರು ನಿಗದಿಪಡಿಸಲಾಗುವುದು.

ಮಂಗಳೂರು ಸೆಂಟ್ರಲ್ ಸಂಜೆ 4.45 ಗಂಟೆಗೆ (ನಿಗದಿತ ನಿರ್ಗಮನ 3.30 ಗಂಟೆಗೆ) ಅಂದರೆ 75 ನಿಮಿಷ ತಡವಾಗಿ ನಿರ್ಗಮಿಸಲಿದೆ.

ಮಂಗಳೂರು ಜಂಕ್ಷನ್ - ಮುಂಬೈ CSMTಎಕ್ಸ್‌ಪ್ರೆಸ್ (ರೈಲು ನಂ. 12134 ) ವೇಳಾಪಟ್ಟಿಯನ್ನು ಸೆ.7ರಂದು ಮರುನಿಗದಿಪಡಿಸಲಾಗುತ್ತದೆ. ಮಂಗಳೂರು ಜಂಕ್ಷನ್ 5.35 ಗಂಟೆಗೆ (ನಿಗದಿತ ನಿರ್ಗಮನ 4.35 ಗಂಟೆಗೆ) ಅಂದರೆ 60 ನಿಮಿಷಗಳ ತಡವಾಗಿ ಹೊರಡಲಿದೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News