ನಾವು ನ್ಯಾಯಾಲಯದ ಮೊರೆ ಹೋಗಲ್ಲ, ಬೀದಿಯಲ್ಲೇ ನ್ಯಾಯ ಪಡೆದೇ ತೀರುತ್ತೇವೆ: ಮಹೇಶ್ ಶೆಟ್ಟಿ ತಿಮರೋಡಿ

Update: 2023-09-24 14:00 GMT

ಕಾರ್ಕಳ : ಸೌಜನ್ಯ ಪ್ರಕರಣದ ಮೂಲಕ ಅತ್ಯಾಚಾರಿಗಳನ್ನು ಶಿಕ್ಷಿಸಿ ಹೆಣ್ಣು ಕುಲಕ್ಕೆ ನ್ಯಾಯ ಒದಗಿಸಬೇಕಾಗಿದೆ ನಾವು ನ್ಯಾಯಾಲಯದ ಮೊರೆ ಹೋಗಲ್ಲ, ಬೀದಿಯಲ್ಲೇ ನ್ಯಾಯ ಪಡೆದೇ ತೀರುತ್ತೇವೆ ಎಂದು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು

ಅವರು ಸೌಜನ್ಯ ಪರ ಹೋರಾಟ ಸಮಿತಿ ಕಾರ್ಕಳ ಇದರ ವತಿ ಯಿಂದ ಕಾರ್ಕಳ ಕುಕ್ಕುಂದೂರು ಪಂಚಾಯತ್ ಮೈದಾನದಲ್ಲಿ ರವಿವಾರ ನಡೆದ ಸೌಜನ್ಯ ಬೃಹತ್ ಜನಾಂದೋಲನ ಸಭೆಯಲ್ಲಿ ಮಾತನಾಡಿದರು.

ಕಾಮಾಂಧರನ್ನು ಗಲ್ಲಿಗೆರಿಸುವ ತನಕ ಸೌಜನ್ಯ ಹೋರಾಟ ಮುಂದುವರೆಯಲಿದೆ. ಇದರಿಂದಾಗಿ ಸಮಾಜದಲ್ಲಿ ಅತ್ಯಾಚಾರಗೊಂಡ ಹೆಣ್ಣು ಮಗುವಿಗೆ ನ್ಯಾಯ ಸಿಗಬೇಕು‌.ನಾವು ಅನ್ಯಾಯದ ವಿರುದ್ದ ನ್ಯಾಯಯುತ ಹೋರಾಟ ಮಾಡುತಿದ್ದೇವೆ. ತಮ್ಮಹೆಸರನ್ನು ಬಳಸಬಾರದೆಂದು ಆದೇಶವನ್ನು ತಂದಿರುವ ಪಾಪಿಗಳೆ ಅತ್ಯಾಚಾರಿಗಳೆ ನೀವು ಮಾಡಿದ ಅತ್ಯಾಚಾರ ,ಅನಾಚಾರ ,ಅಕ್ರಮ, ಕೊಲೆ, ಕಾನೂನು ಬಾಹಿರ ಚಟುವಟಿಕೆಗಳನ್ನು ಕಾನೂನಿನ ಮುಂದೆ ತಂದು ನಿಲ್ಲಿಸುತ್ತೇವೆ ಎಂದರು.

ರಾಜಕೀಯ ನಾಯಕರು, ಪೊಲೀಸ್ ಅಧಿಕಾರಿಗಳೇ ಇದು ನಮ್ಮ ಎಚ್ಚರಿಕೆಯಲ್ಲ ವಿನಂತಿ. ಎಚ್ಚರಿಕೆಗೆ ಇನ್ನೂ ಕಾಲ ಬಾಕಿ ಇದೆ ಮುಂದಿನ ದಿನಗಳಲ್ಲಿ ಧರ್ಮಸ್ಥಳ ಹಾಗೂ ವಿಧಾನ ಸಭೆಗೂ ಮುತ್ತಿಗೆ ಹಾಕುತ್ತೇವೆ ಮಾತ್ರವಲ್ಲ ಇಡೀ ರಾಜ್ಯದ ಜನತೆ ವಿಧಾನ ಸೌಧಕ್ಕೆ ನುಗ್ಗಲಿದ್ದೇವೆ. ಶಾಂತಿಯುತ ಹೋರಾಟ ನಡೆಸಿದ ನಮ್ಮನ್ನು ಕ್ರಾಂತಿಯುತರನ್ನಾಗಿಸಬೇಡಿ. ನಮ್ಮ ಹೋರಾಟ ಸತ್ಯ ನ್ಯಾಯ ನೀತಿಗಾಗಿ ಅದು ಪ್ರತಿಸ್ಟಾಪನೆ ಆಗಬೇಕು ಎಂದರು.

ದ.ಕ. ವಿದ್ಯಾರ್ಥಿ ಸೋಶಿಯಲ್ ಎಜುಕೇಶನ್ ಸೊಸೈಟಿ ಸಂಸ್ಥಾಪಕ ಶ್ರೀನಿವಾಸ ಮಿಜಾರು ಮಾತನಾಡಿ ರಾಜ ಪ್ರಭುತ್ವ ನೆಲೆಯಾಗಿದ್ದ ಕಾರಣ ಪ್ರಜಾಪ್ರಭುತ್ವ ಅವನತಿಯತ್ತ ಸಾಗುತ್ತಿದೆ ಇದರಿಂದಾಗಿ ಸೌಜನ್ಯಳಿಗೆ ನ್ಯಾಯ ಸಿಗುತಿಲ್ಲ. ಶೋಭ ಕರಂದ್ಲಾಜೆ ಸೌಜನ್ಯ ಪರ ದ್ವನಿ ಎತ್ತಲಿಲ್ಲ, ದ.ಕ. ವಿದ್ಯಾರ್ಥಿ ಸೋಶಿಯಲ್ ಎಜುಕೇಶನ್ ಸೊಸೈಟಿ ಸೌಜನ್ಯ ಪರ ನ್ಯಾಯ ಹೋರಾಟದಲ್ಲಿ ಭಾಗಿಯಾಗಿದೆ ಎಂದ ಅವರು ಸಿದ್ದರಾಮಯ್ಯ ಅವರೇ ನೀವು ಈ ಬಾರಿ 5 ಗ್ಯಾರಂಟಿಗಳನ್ನು ಕೊಟ್ಟಿದ್ದೀರಿ 6 ನೆಯದ್ದಾಗಿ ನ್ಯಾಯಭಾಗ್ಯ ಕೊಡಿ. ಸೌಜನ್ಯ ಪ್ರಕರಣ ಮುಗಿದ ಅಧ್ಯಾಯ ಅಂದ ಪರಮೇಶ್ವರ್ ಅವರೇ ಜನ ಸಾಮಾನ್ಯನ ಕೂಗಿಗೆ ಸ್ಪಂದಿಸಿ ಇಲ್ಲವಾದರೆ ಅದು ನಿಮ್ಮ ರಾಜಕೀಯ ಜೀವನದ ಕೊನೆಯ ಅಧ್ಯಾಯ ವಾಗಬಹುದು ಎಂದರು.

ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಡಾ. ಪಿ ಮೂರ್ತಿ ಮಾತನಾಡಿ ಸೌಜನ್ಯ ಹೋರಾಟ ರಾಜಕೀಯಪರವಲ್ಲ, ವ್ಯಕ್ತಿ ಪರವಲ್ಲ ಸೌಜನ್ಯ ಪರವಾದ ನ್ಯಾಯಯುತ ಹೋರಾಟವಾಗಿದೆ. ಅಂಬೇಡ್ಕರ್ ಸೇನೆ ರಾಜ್ಯದ 31ಜಿಲ್ಲೆಗಳಲ್ಲಿ ಸೌಜನ್ಯ ಪರವಾಗಿದ್ದ ಹೋರಾಟಕ್ಕೆ ಕರೆ ನೀಡಲಿದೆ. ಹಣಬಲ ,ತೋಳ್ಬಲ, ರಾಜಕೀಯ ಮೂಲಕ ಸಂವಿಧಾನ ಹಾಗೂ ಕಾನೂನನ್ನು ಮುಚ್ಚಿಡಲು ಸಾಧ್ಯವಿಲ್ಲ ಈ ಪ್ರಕರಣದಿಂದಾಗಿ ಕನ್ನಡಿಗರು ತಲೆ ತಗ್ಗಿಸುವಂತಾಗಿದೆ ಈ ಸರಕಾರ ಮುಂದೆಯೂ ಉಳಿಯ ಬೇಕಾದರೆ ಮರು ತನಿಖೆ ಆಗಲೇ ಬೇಕು ರಾಜ್ಯದ 27ಸಂಸದರು ಯಾರ ಗುಲಾಮಗಿರಿ ಮಾಡ್ತಾ ಇದ್ದೀರಾ ಎಂದು ಪ್ರಶ್ನಿಸಿದ ಅವರು ದಲಿತ ಪರ ಕಾನೂನು ದಲಿತರಿಗೆ ಅನ್ಯಾಯ ಆದಾಗ ಉಪಯೋಗಿಸಬೇಕು ಹೊರತು ಆ ಕಾನೂನನ್ನು ಯಾರೂ ದುರುಪಯೋಗ ಪಡಿಸಬೇಡಿ ಎಂದು ಕರೆ ನೀಡಿದರು.

ಸಾಮಾಜಿಕ ಹೋರಾಟ ಗಿರೀಶ್ ಮಟ್ಟೆಣ್ಣನವರ್ ಮಾತನಾಡಿ ಸೌಜನ್ಯ ಹೋರಾಟದ ಜೊತೆ ಜೊತೆಗೆ ಕಾವೇರಿ ಹೋರಾಟದಲ್ಲಿ ಭಾಗವಹಿಸುತ್ತಿರುವ ರೈತರು ಕನ್ನಡ ಪರ ಸಂಘಟನೆ ವೇದಿಕೆಯ ಬೆಂಬಲ ಸೂಚಿಸಿದ ಅವರು ಮುಂದಿನ ದಿನಗಳಲ್ಲಿ ಹೋರಾಟದ ಚಿತ್ರಣ ಬದಲಾಗಲಿದೆ, ಸೌಜನ್ಯ ಪೋಟೋದೊಂದಿಗೆ ಸೆಲ್ಫಿ ಅಭಿಯಾನ, ಪತ್ರ ಅಭಿಯಾನ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಕೇಂದ್ರ ಹಾಗೂ ರಾಜ್ಯ ರಾಜಕೀಯ ನಾಯಕರನ್ನು ಮುಟ್ಟಲು ಜಸ್ಟಿಸ್ ಫಾರ್ ಸೌಜನ್ಯ ಟ್ರೆಂಡಿಗ್ ಅಭಿಯಾನ ನಡೆಸಲಿದೆ. ಆ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸಲಿದೆ ಎಂದರು .

ಅತ್ಯಾಚಾರಿಗಳ ಗುಂಪಿಗೆ ಗಲ್ಲು ಶಿಕ್ಷೆಯಾಗಬೇಕು. ಸೌಜನ್ಯ ಹಾಗೂ ಸಂತೋಷ ರಾವ್ ಕುಟುಂಬಕ್ಕೆ ನ್ಯಾಯ ಸಿಗಬೇಕು. ಅತ್ಯಾಚಾರ ವಿರುದ್ಧದ ಹೋರಾಟವೇ ಹಿಂದುತ್ವ. ಹಲಾಲ್, ಹಿಜಾಜ್ ಬಗ್ಗೆ ಬಾಷಣ ಬಿಗಿಯುವ ಹಲಾಲ್ ಶ್ರೀ, ಹಲಾಲ್ ಶ್ರೀಮತಿ ಯವರು ಪೋಲಿಸ್ ಲಾಕಪ್ನಲ್ಲಿದ್ದಾರೆ. ಸಿ ಸಿ ಬಿ ಪೋಲಿಸರ ಜೀಪಿನ ಹಿಂದಿನ ಸಿಟಿನಲ್ಲಿ ಹಿಜಾಬ್ ಹಾಕಿ ಅಡಗಿ ಕುಳಿತುಕೊಳ್ಳುವ ಇವರ ಕೆಲಸ ಸಮಾಜದಲ್ಲಿ ದ್ವೇಷ ಹುಟ್ಟಿಸುವ, ತಲೆ ಕೆಡಿಸುವ ಮಾತ್ರವಲ್ಲ ಡೀಲ್ ಮಾಡೋದು ಎಂದರು.

ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ ಮಾತನಾಡಿ ಸಾಮಾಜಿಕ ಜಾಲತಾಣಗಳು ಮಾಧ್ಯಮಗಳಲ್ಲಿ ಹೋರಾಟ ವನ್ನು ಹತ್ತಿಕ್ಕಲು ವಿವಿಧ ತಂತ್ರಗಾರಿಕೆ ವಿರೋಧಿ ಬಣ ನಡೆಸುತ್ತಿದೆ ಎಂದರು.

ತನ್ನ ಭಾಷಣದುದ್ದಕ್ಕೂ ಹೆಸರು ಉಲ್ಲೇಖಿಸಿದಂತೆ ಆದೇಶ ಪಡೆದಿದ್ದ ಕುಟುಂಬದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಅವರು ನಾವು ರಾಷ್ಟ್ರದ ನಾಯಕರು ಗಳಾದ ಗಾಂಧಿ, ಅಂಬೇಡ್ಕರ್ ಅವರ ಬಗ್ಗೆ ಮಾತನಾಡಬಾರದು ಅದರೆ ಇವನ ಮಾತನಾಡಬಾರದು ಇವನೇನು ದೊಣ್ಣೆ ನಾಯಕನೋ ಅಥವಾ ನನ್ನನ್ನು ದತ್ತು ತೆಗೆದುಕೊಂಡಿದ್ದಾರೋ ಎಂದು ಪ್ರಶ್ನಿಸಿದರು.

ಧಾರ್ಮಿಕ ಚಿಂತಕ ತಮ್ಮಣ್ಣ ಶೆಟ್ಟಿ ಮಾತನಾಡಿ ಇದು ಅಮಾಯಕ ಮೇಲೆ ಹಚ್ಚಿಸಿದ ಕಲೆಯನ್ನು ತೊಳೆಯುವ ಹೋರಾಟ, ಸರಣಿ ಅತ್ಯಾಚಾರಿಗಳ ವಿರುದ್ಧದ ವಿಕ್ರತಿಯನ್ನು ಅಂತ್ಯಗೊಳಿಸುವ ಹೋರಾಟವಾಗಿದೆ. ಸಂತ್ರಸ್ತ ನಿರಪರಾಧಿ ಸಂತೋಷ್ ರಾವ್ ಹಾಗೂ ಸೌಜನ್ಯ ಳಿಗೆ ನ್ಯಾಯ ದೊರಕಿಸಬೇಕಾಗಿದೆ. ಉಡುಪಿ ಜಿಲ್ಲೆ ಉಸ್ತುವಾರಿ ಲಕ್ಷ್ಮಿ ಹೆಬ್ಬಾಳ್ಕರ್, ಸ್ಪೀಕರ್ ಯು ಟಿ ಖಾದರ್ , ಹಾಗು ದ.ಕ ಉಸ್ತುವಾರಿ ಸಚಿವ ಗುಂಡುರಾವ್ ಅವರನ್ನು ಒತ್ತಾಯಿಸಿದರು.

ಸೌಜನ್ಯ ತಾಯಿ‌ ಕುಸುಮಾವತಿ ಮಾತನಾಡುತ್ತಾ ಪವರ್ ಟಿವಿ ರಾಕೇಶ್ ಶೆಟ್ಟಿಗೆ ಸೌಜನ್ಯ ಫೋಟೋ ಬಳಸಿ ಮಾನ ಮರ್ಯಾದೆ ಹರಾಜು ಮಾಡಲು ಹಕ್ಕು ಕೊಟ್ಟವರು ಯಾರು, ಆತ ಖಂಡಿತವಾಗಿಯೂ ಉದ್ದಾರ ಆಗಲ್ಲ ದೈವ ದೇವರುಗಳ ಶಾಪ ಅವರಿಗೆ ತಟ್ಟಲಿದೆ ನ್ಯಾಯಕ್ಕಾಗಿ ನಡೆಯುವ ಹೋರಾಟದಲ್ಲಿ ತಮ್ಮನ್ನು ಬೆಂಬಲಿಸುವಂತೆ ಮಾಧ್ಯಮಗಳ ಮುಂದೆ ಸಾರ್ವಜನಿಕರಲ್ಲಿ ಒತ್ತಾಯ ಮಾಡಿದರು.

ನಿರಪರಾಧಿ ಸಂತೋಷ್ ರಾವ್ ಸಹೋದರ ಸಂಜಯ್ ರಾವ್ ಮಾತನಾಡಿ ಸಂತೋಷ ರಾವ್ ನಿರಪರಾಧಿ ಎಂಬುದು ಸಾಭಿತಾಗಿದೆ ನಮ್ಮನ್ನು ಗೌರವಯುತ ವಾಗಿ ಕಾಣಬೇಕು, ಸಮಾಜದಲ್ಲಿ ಗೌರವಯುತವಾಗಿ ಬದುಕಲು ಅವಕಾಶ ನೀಡಿ ಎಂದು ಸಾರ್ವಜನಿಕ ರಲ್ಲಿ ಮನವಿ ಮಾಡಿದರು.

ಸಾಮಾಜಿಕ ಹೋರಾಟಗಾರ್ತಿ ಸಂಧ್ಯಾ ಪವಿತ್ರ ನಾಗರಾಜ್ ಮಾತನಾಡಿ, ಸತ್ಯ ನ್ಯಾಯ ದ ಹೋರಾಟದಲ್ಲಿ ಸದಾ ಕೆಲಸ ಮಾಡುತ್ತೇನೆ. ಇದರಲ್ಲಿ ಅಂಜಿಕೆ ಇಲ್ಲವೇ ಇಲ್ಲ ಪ್ರಾಣ ಕಳೆದುಕೊಂಡರೂ ಯಾವುದೇ ಚಿಂತೆಯಿಲ್ಲ, ಜೈಲಿಗೆ ಹೋಗುವ ಪ್ರಮೇಯ ಬಂದರೂ ಹಿಂಜರಿಯುವುದಿಲ್ಲ ಸತ್ಯವನ್ನು ಯಾರೂ ತಡೆಯುವಂತಿಲ್ಲ ಎಂದರು.

ಕಾರ್ಕಳದಲ್ಲಿ ಸಭೆ ನಡೆಸಲು ಅವಕಾಶ ನೀಡಬಾರದು ಎಂದು ಮನವಿ ಸಲ್ಲಿಸಲು ಉಡುಪಿ ಪೋಲಿಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದವರನ್ನು ಉದ್ದೇಶಿಸಿ ದೊಡ್ಡವರು ಸಣ್ಣವರು ಎಂಬ ಭೇದ ಯಾರಿಗೂ ಇಲ್ಲ ಸಭೆ ನಡೆಸಲು ಎಲ್ಲರಿಗೂ ಅವಕಾಶವಿದೆ ಎಂಬ ಹೇಳಿಕೆ ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಸಭೆಯಲ್ಲಿ ಮಾತನಾಡಿದ ವ್ಯಕ್ತಿಗಳು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ನಡೆ ಬಗ್ಗೆ ಕಾರ್ಯಕ್ರಮದುದ್ದಕ್ಕೂ ಭಾಷಣಕಾರರು ಮೆಚ್ಚುಗೆ ವ್ಯಕ್ತಗೊಳಿಸಿದರು ಹಾಗೂ ಸಭೆಯಲ್ಲಿ ಭಾಗವಹಿಸಿದ್ದ ಜನರು ಚಪ್ಪಾಳೆ ಸುರಿಮಳೆ ಗೈದರು. ಪ್ರಮೀಳಾ ಕಾರ್ಕಳ ಪ್ರಾರ್ಥಿಸಿದರು,  ರತ್ನಾಕರ್ ಅಮೀನ್ ಸ್ವಾಗತಿಸಿ, ಧನ್ಯವಾದವಿತ್ತರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News