ಉಳ್ಳಾಲ ಪ್ರೆಸ್ ಕ್ಲಬ್ ವತಿಯಿಂದ ಯೋಗಗುರು ಕುಶಾಲಪ್ಪ ಗೌಡ, ಸಂತೋಷ್ ಬೋಳಿಯಾರ್‌ಗೆ ಸನ್ಮಾನ

Update: 2024-08-13 17:31 GMT

ಉಳ್ಳಾಲ: ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡುವಲ್ಲಿ ಯೋಗ ಬಹಳಷ್ಟು ಸಹಕಾರಿಯಾಗಿದ್ದು, ನಿರಂತರವಾಗಿ ಯೋಗಶಿಕ್ಷಣ ಹಾಗೂ ತರಬೇತಿಯನ್ನು ನೀಡುವ ಮೂಲಕ ಯೋಗದಿಂದ ಸಾಧಿಸಬಹುದು ಎಂಬುದನ್ನು ಎಲ್ಲರಿಗೂ ತೋರಿಸಿಕೊಡುವ ಮೂಲಕ ಗೊಲ್ಡನ್ ಬುಕ್ ಆಪ್ ರೆಕಾರ್ಡ್ ನಲ್ಲಿ ದಾಖಲೆಯನ್ನು ಮಾಡಿರುವುದೇ ಇದಕ್ಕೆ ಸಾಕ್ಷಿ ಎಂದು ಯೋಗಗುರು ಕುಶಾಲಪ್ಪ ಗೌಡ ತಿಳಿಸಿದರು.

ತೊಕ್ಕೊಟ್ಟುವಿನ ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ವತಿಯಿಂದ ಮಂಗಳವಾರ ಆಯೋಜಿಸಲಾದ ತಿಂಗಳ ಬೆಳಕು-ಗೌರವ ಅತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ವೃತ್ತಿಯನ್ನು ಪ್ರೀತಿಸಿ ಅದರಲ್ಲಿ ಶ್ರಮಹಾಕಿದರೆ ಮಾತ್ರ ಏಳಿಗೆಯನ್ನು ಸಾಧಿಸಬಹುದು. ಅದಕ್ಕೆ ಉದಾಹರಣೆ ಎಂಬಂತೆ ಸತತ 25ಗಂಟೆಗಳ ಕಾಲ ಅನ್ನ-ಆಹಾರವಿಲ್ಲದೇ ಸುಮಾರು 3658ಮಂದಿಗೆ ಯೋಗ ಶಿಕ್ಷಣವನ್ನು ನೀಡಲು ಸಾಧ್ಯವಾಯಿತಲ್ಲದೆ ಅದು ಗೊಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದ್ದು ಅದು ಜೀವನದ ಸಾರ್ಥಕ ಕ್ಷಣಗಳು ಎಂದರು.

ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಯೊಂದು ಸರಕಾರಿ ಶಾಲೆಯೊಂದರ ಉಳಿವಿಗಾಗಿ ಯೋಗ ತರಬೇತಿಯನ್ನು ವೈದ್ಯರು ಹಾಗೂ ವೃತ್ತಿಪರರು ಯೋಗ ಅಭ್ಯಾಸವನ್ನು ಮಾಡಿದ್ದಾರೆ. ಸರಕಾರಿ ಶಾಲೆಗಳನ್ನು ಉಳಿಸುವ ಸಲುವಾಗಿ ಸುದೀರ್ಫ ಯೋಗ ತರಬೇತಿ ನೀಡುವ ಮೂಲಕ ನಡೆದ ಈ ಸಾಧನೆ ಮೂಲಕ ಪ್ರಪಂಚದ ಗಮನ ಇತ್ತ ಸೆಳೆಯಲಾಗಿದೆ ಎಂದು ನುಡಿದರು.

ದೈನಂದಿನ ಜೀವನದಲ್ಲಿ ಯೋಗವನ್ನು ಅಭ್ಯಾಸ ಮಾಡುವ ಮೂಲಕ ಯೋಗದಿಂದ ರೋಗಮುಕ್ತ ಜೀವನವನ್ನು ಸಾಧಿಸ‌ ಬಹುದು. ಅದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶಯ ಕೂಡಾ ಆಗಿದೆ. ಯೋಗವನ್ನು ಆನ್ ಲೈನ್ ಮೂಲಕ ಅಥವಾ ಪುಸ್ತಕದಲ್ಲಿ ನೋಡಿ ಕಲಿಯುವುದು ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ.‌ ಯಾವುದೇ ವಿದ್ಯೆಯಾದರೂ ಗುರುಗಳ ಮುಖಾಂತರವೇ ಕಲಿಯುವುದು ಉತ್ತಮ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ದಿ. ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ನ ನಿಕಟಪೂರ್ವ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಸಮಾಜಮುಖಿಯಾಗಿ ಉಳ್ಳಾಲ ಪತ್ರಕರ್ತರು ಕಾರ್ಯನಿರ್ವಹಿಸು ತ್ತಿದ್ದು ಮಾನವೀಯ ಸೇವೆಗಳನ್ನು ಸಲ್ಲಿಸುವ ಮೂಲಕ ಎಲ್ಲರಿಗೆ ಮಾದರಿಯಾಗಿದ್ದಾರೆ‌ ಎಂದು ಹೇಳಿದರು.

‌ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ವಸಂತ್ ಎನ್. ಕೊಣಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂತೋಷ್ ರೈ ಹಾಗೂ ಕುಶಾಲಪ್ಪ ಗೌಡರನ್ನು ಸನ್ಮಾನಿಸಲಾಯಿತು.

ಪ್ರಧಾನ ಕಾರ್ಯದರ್ಶಿ ಶಶಿಧರ್ ಪೊಯ್ಯತ್ತಬೈಲ್ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಈ ಸಂದರ್ಭ ಪತ್ರಕರ್ತರ ಸಂಘದ ಉಪಾಧ್ಯಕ್ಷ ಆರೀಫ್ ಯು.ಆರ್ ಕಲ್ಕಟ್ಟ, ಕೋಶಾಧಿಕಾರಿ ಬಶೀರ್ ಕಲ್ಕಟ್ಟ, ಉಳ್ಳಾಲ ತಾಲೂಕು ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಆಸೀಫ್ ಬಬ್ಬುಕಟ್ಟೆ, ಶಿವಶಂಕರ್ ,ಅಶ್ವಿನ್ ಕುತ್ತಾರ್, ಗಣೇಶ್ ತಲಪಾಡಿ ಉಪಸ್ಥಿತರಿದ್ದರು.

ಕಾರ‍್ಯದರ್ಶಿಗಳಾದ ಡಾ‌. ಸತೀಶ್ ಕೊಣಾಜೆ ಹಾಗೂ ವಜ್ರ ಗುಜರನ್ ಅತಿಥಿಗಳನ್ನು ಪರಿಚಯಿಸಿದರು. ಉಪಾಧ್ಯಕ್ಷ ದಿನೇಶ್ ನಾಯಕ್ ಸ್ವಾಗತಿಸಿದರು. ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾಯಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News