ಟ್ರಾಫಿಕ್ ಜಾಮ್ ನಿಂದ ಪಾರಾಗಲು ಕಾಲುದಾರಿ ಸೇತುವೆ ಮೇಲೆ ಆಟೋ ರಿಕ್ಷಾ ಚಾಲನೆ: ಇಬ್ಬರ ಬಂಧನ

Update: 2023-09-04 07:19 GMT

Photo: Twiter

ಹೊಸದಿಲ್ಲಿ: ಟ್ರಾಫಿಕ್ ಜಾಮ್ ನಿಂದ ಪಾರಾಗಲು ಆಟೋ-ರಿಕ್ಷಾ ಚಾಲಕನೊಬ್ಬ ತನ್ನ ತ್ರಿಚಕ್ರ ವಾಹನವನ್ನು ಕಿಕ್ಕಿರಿದು ತುಂಬಿದ್ದ ಕಾಲುದಾರಿ ಸೇತುವೆ ಮೇಲೆ ಓಡಿಸಿದ ಘಟನೆ ಹಮ್ದರ್ದ್ ನಗರ ರೆಡ್ ಲೈಟ್ ಸಂಗಮ್ ವಿಹಾರ್ ಟ್ರಾಫಿಕ್ ಸರ್ಕಲ್ ನಲ್ಲಿ ನಡೆದಿದೆ.

ಆಟೋರಿಕ್ಷಾ ಚಾಲಕ ಫುಟ್ ಓವರ್ ಬ್ರಿಡ್ಜ್ ಕೆಳಗಿನ ರಸ್ತೆಯಲ್ಲಿ ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿದ್ದ. ವಾಹನ ದಟ್ಟಣೆಯನ್ನು ತಪ್ಪಿಸುವ ಪ್ರಯತ್ನದಲ್ಲಿ, ಚಾಲಕ 25 ವರ್ಷದ ಮುನ್ನಾ ತನ್ನ ಆಟೋವನ್ನು ಫುಟ್ ಪಾತ್ ಮೇಲೆ ಏರಿಸಿ ನಂತರ ಅದನ್ನು ಕಾಲುದಾರಿ ಸೇತುವೆಯ ಮೆಟ್ಟಿಲುಗಳ ಮೇಲೆ ಓಡಿಸಿದ್ದಾನೆ.

ವೀಡಿಯೊದಲ್ಲಿ ಕಂಡುಬರುವಂತೆ, ಚಾಲಕನು ಸೇತುವೆಯ ಮೇಲೆ ಆಟೋರಿಕ್ಷಾವನ್ನು ಓಡಿಸಿದಾಗ ಅದು ಖಾಲಿಯಾಗಿತ್ತು. ಆದರೆ, ರಿಕ್ಷಾವು ಮೆಟ್ಟಿಲುಗಳ ಮೇಲೆ ಚಲಿಸಲು ಚಾಲಕನಿಗೆ ಸಹಾಯ ಮಾಡಿದ್ದ ಇನ್ನೊಬ್ಬ ವ್ಯಕ್ತಿ ನಂತರ ವಾಹನದೊಳಗೆ ಜಿಗಿಯುತ್ತಿರುವುದು ಕಂಡುಬಂದಿದೆ.

ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ದಿಲ್ಲಿ ಪೊಲೀಸರು ಆಟೋವನ್ನು ವಶಪಡಿಸಿಕೊಂಡರು ಹಾಗೂ ಸಂಗಮ್ ವಿಹಾರ್ ನಿವಾಸಿಯಾದ 25 ವರ್ಷದ ಚಾಲಕನನ್ನು ಬಂಧಿಸಿದ್ದಾರೆ. ಆತನಿಗೆ ಸಹಕರಿಸಿ ಆಟೋ ಒಳಗೆ ಜಿಗಿದವನನ್ನೂ ಬಂಧಿಸಲಾಗಿದೆ.

ಆತನನ್ನು ಅಮಿತ್ ಎಂದು ಗುರುತಿಸಲಾಗಿದ್ದು ಈತನೂ ಸಂಗಮ್ ವಿಹಾರ್ ನಿವಾಸಿ ಆಗಿದ್ದಾನೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News