ಭೀಮಾ ಕೋರೆಗಾಂವ್ ಪ್ರಕರಣ ; ಗೌತಮ್ ನವ್ಲಾಖಾಗೆ ಇಲೆಕ್ಟ್ರಾನಿಕ್ಸ್ ಸಾಕ್ಷ್ಯಗಳ ಪ್ರತಿ ನೀಡದಿರುವುಕ್ಕೆ ಎನ್ಐಎಗೆ ನ್ಯಾಯಾಲಯ ತರಾಟೆ

Update: 2024-01-17 15:43 GMT

ಗೌತಮ್ ನವ್ಲಾಖಾ | PTI 

ಹೊಸದಿಲ್ಲಿ: ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದ ಇಲೆಕ್ಟ್ರಾನಿಕ್ ಸಾಕ್ಷಗಳ ಪ್ರತಿಯನ್ನು ಮಾನವ ಹಕ್ಕುಗಳ ಹೋರಾಟಗಾರ ಗೌತಮ್ ನವ್ಲಾಖಾ ಅವರಿಗೆ ಒದಗಿಸಲು ವಿಫಲವಾದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯನ್ನು ವಿಶೇಷ ನ್ಯಾಯಾಲಯ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ.

ನ್ಯಾಯಾಲಯದ ಹಲವು ಆದೇಶಗಳ ಹೊರತಾಗಿಯೂ ರಾಷ್ಟ್ರೀಯ ತನಿಖಾ ಸಂಸ್ಥೆ ಕಳೆದ ನಾಲ್ಕು ವರ್ಷಗಳಿಂದ ಅಪರಾಧ ಕಾನೂನು ಕ್ರಮ ಸಂಹಿತೆಯ ಸೆಕ್ಷನ್ 207 ಅನ್ನು ಅನುಸರಿಸಿಲ್ಲ ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಜೇಶ್ ಕಟಾರಿಯಾ ಅವರು ಅಭಿಪ್ರಾಯಿಸಿದ್ದಾರೆ.

2018ರಲ್ಲಿ ಪುಣೆ ಸಮೀಪದ ಗ್ರಾಮದಲ್ಲಿ ನಡೆದ ಜಾತಿ ಹಿಂಸಾಚಾರಕ್ಕೆ ಸಂಬಂಧಿಸಿದ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ನವ್ಲಾಖಾ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿಂಸಾಚಾರಕ್ಕೆ ಸಂಚು ರೂಪಿಸಿದ ಆರೋಪದಲ್ಲಿ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ ಬಂಧಿತರಾಗಿರುವ 16 ಮಂದಿಯಲ್ಲಿ ನವ್ಲಾಖಾ ಕೂಡ ಸೇರಿದ್ದಾರೆ.

ನವ್ಲಾಖಾ ಅವರಿಗೆ ಬಾಂಬೆ ಉಚ್ಚ ನ್ಯಾಯಾಲಯ ಕಳೆದ ವರ್ಷ ಡಿಸೆಂಬರ್ 19ರಂದು ಜಾಮೀನು ನೀಡಿತ್ತು. ಆದರೆ, ಇದರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲು ಆದೇಶಕ್ಕೆ ತಡೆ ನೀಡಿತ್ತು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News