ಖ್ಯಾತ RJ ಸಿಮ್ರಾನ್ ಸಿಂಗ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ; ಆತ್ಮಹತ್ಯೆ ಶಂಕೆ
ಚಂಡೀಗಢ: ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿರುವ, ಜಮ್ಮು ಮತ್ತು ಕಾಶ್ಮೀರದ ಜನಪ್ರಿಯ ಹವ್ಯಾಸಿ ರೇಡಿಯೊ ಜಾಕಿ (RJ) ಸಿಮ್ರಾನ್ ಸಿಂಗ್ ಗುರುಗ್ರಾಮದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿರು ಶಂಕೆ ವ್ಯಕ್ತವಾಗಿದೆ.
ತಮ್ಮ ಲಕ್ಷಾಂತರ ಅಭಿಮಾನಿಗಳ ನಡುವೆ ಆರ್ಜೆ ಸಿಮ್ರನ್ ಎಂದೇ ಜನಪ್ರಿಯರಾಗಿದ್ದ 25 ವರ್ಷದ ಸಿಮ್ರನ್ ಸಿಂಗ್, ಡಿಸೆಂಬರ್ 13ರಂದು ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಕೊನೆಯ ರೀಲ್ ಪೊಸ್ಟ್ ಮಾಡಿದ್ದರು.
ಆಕೆಯ ಮೃತದೇಹವು ಗುರುಗ್ರಾಮ್ ಸೆಕ್ಟರ್ 47ರಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದ್ದು, ಈ ಕುರಿತು ಆಕೆಯೊಂದಿಗೆ ವಾಸಿಸುತ್ತಿದ್ದ ಆಕೆಯ ಸ್ನೇಹಿತ ಕರೆ ಮಾಡಿ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆಯ ಮೃತದೇಹವನ್ನು ಆಕೆಯ ಕುಟುಂಬದ ಸದಸ್ಯರ ವಶಕ್ಕೆ ಒಪ್ಪಿಸಲಾಗಿದೆ ಎಂದೂ ಪೊಲೀಸರು ಹೇಳಿದ್ದಾರೆ.
ಜಮ್ಮು ಪ್ರಾಂತ್ಯದ ನಿವಾಸಿಯಾಗಿದ್ದ ಸಿಮ್ರಾನ್ ಸಿಂಗ್ ರನ್ನು ಅವರ ಅಭಿಮಾನಿಗಳು ʼಜಮ್ಮು ಕಿ ಧಡ್ಕನ್ʼ ಎಂದೇ ಕರೆಯುತ್ತಿದ್ದರು.