ಪ್ರಧಾನಿ ಮೋದಿ ಜನ್ಮದಿನದಂದು ರಕ್ತದಾನಿಯಂತೆ ನಟಿಸಿ ಟ್ರೋಲ್ ಗೆ ಒಳಗಾದ ಬಿಜೆಪಿ ಮೇಯರ್

Update: 2024-09-21 05:14 GMT

Screengrab: X/@SachinGuptaUP

ಉತ್ತರಪ್ರದೇಶ: ಮೊರಾದಾಬಾದ್‌ನ ಮೇಯರ್ ಮತ್ತು ಬಿಜೆಪಿಯ ಹಿರಿಯ ನಾಯಕ ವಿನೋದ್ ಅಗರ್ವಾಲ್ ಪ್ರಧಾನಿ ನರೇಂದ್ರ ಮೋದಿಯ ಜನ್ಮದಿನದಂದು ಆಸ್ಪತ್ರೆಯ ಬೆಡ್ ಮೇಲೆ ಮಲಗಿ ರಕ್ತದಾನಿಯಂತೆ ನಟಿಸಿ ಟ್ರೋಲ್ ಗೆ ಒಳಗಾಗಿದ್ದಾರೆ.

ಮೊರಾದಾಬಾದ್‌ನ ಸ್ಥಳೀಯ ಬಿಜೆಪಿ ಕಚೇರಿಯಲ್ಲಿ ಸೆ.17ರಂದು ರಕ್ತದಾನ ಶಿಬಿರ ನಡೆದಿದೆ. ಮೇಯರ್ ಹಾಸಿಗೆಯ ಮೇಲೆ ಮಲಗಿರುವುದನ್ನು ವೀಡಿಯೊ ತೋರಿಸುತ್ತದೆ, ಆರೋಗ್ಯ ಸಿಬ್ಬಂದಿಗಳು ಅವರ ಬಿಪಿ ಪರೀಕ್ಷಿಸಲು ತಯಾರಿ ನಡೆಸುತ್ತಿದ್ದರು. ಆದರೆ ಬಿಜೆಪಿ ನಾಯಕ ಬೇಡ ಬಿಡಿ ಎಂದು ವೈದ್ಯರಿಗೆ ಹೇಳಿದ್ದಾರೆ.

ರಕ್ತದಾನದ ಪ್ರಕ್ರಿಯೆಗೆ ವೈದ್ಯಕೀಯ ಸಿಬ್ಬಂದಿಗಳು ಸೂಜಿಯನ್ನು ಹೊರತೆಗೆಯುತ್ತಿದ್ದಂತೆ, ಮೇಯರ್ ಇದ್ದಕ್ಕಿದ್ದಂತೆ ಹಾಸಿಗೆಯಿಂದ ಎದ್ದು ಕೋಣೆಯಿಂದ ಹೊರ ನಡೆದಿದ್ದಾರೆ. ಈ ಕುರಿತ ವೀಡಿಯೊ ವೈರಲ್ ಆಗಿದ್ದು, ಅಗರ್ವಾಲ್ ಕ್ಯಾಮೆರಕ್ಕಾಗಿ ನಕಲಿ ರಕ್ತದಾನ ಮಾಡಿದ್ದಾರೆ ಎಂದು ಟ್ರೋಲ್‌ ಗೆ ಒಳಗಾಗಿದ್ದಾರೆ.

ವೈರಲ್ ವೀಡಿಯೊದ ಬಗ್ಗೆ ವಿನೋದ್ ಅಗರ್ವಾಲ್ ಅವರಲ್ಲಿ ಪ್ರಶ್ನಿಸಿದಾಗ ತನ್ನ ಮಾನಹಾನಿ ಮಾಡಲು ಮಾಡಿರುವ ಪಿತೂರಿ ಇದು ಎಂದು ಹೇಳಿದ್ದಾರೆ. ರಕ್ತದಾನ ಮಾಡಲು ಶಿಬಿರಕ್ಕೆ ಹೋಗಿದ್ದೆ, ಆದರೆ ವೈದ್ಯರು ಮಧುಮೇಹಿ ಎಂದು ರಕ್ತದಾನಕ್ಕೆ ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯ ಜನ್ಮದಿನದ ಹಿನ್ನೆಲೆ ಸೆ.17ರಂದು ಬಿಜೆಪಿಯ ಯುವ ಘಟಕದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ನಾನು ಕೂಡ ರಕ್ತದಾನ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದೆ. ಹೀಗಾಗಿ ರಕ್ತ ತೆಗೆದುಕೊಳ್ಳುವ ಮೊದಲು ವೈದ್ಯರು ನನಗೆ ಏನಾದರೂ ಕಾಯಿಲೆ ಇದೆಯೇ ಎಂದು ಕೇಳಿದರು. ನಾನು ಮಧುಮೇಹ ಇದೆ ಮತ್ತು ಎರಡು ವರ್ಷಗಳ ಹಿಂದೆ ಹೃದಯ ಸಮಸ್ಯೆ ಇತ್ತು ಎಂದು ಹೇಳಿದ್ದೆ. ಈ ವೇಳೆ ವೈದ್ಯರು ನನಗೆ ರಕ್ತದಾನ ಮಾಡದಂತೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News