ಮುಸ್ಲಿಂ ಮಹಿಳೆಯರ ಬುರ್ಖಾ ತೆಗೆಸಿ ಗುರುತಿನ ಚೀಟಿ ಪರಿಶೀಲನೆ: ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ವಿರುದ್ಧ FIR
ಹೈದರಾಬಾದ್: ಮತ ಚಲಾಯಿಸಲು ಬಂದ್ದಿದ್ದ ಮುಸ್ಲಿಂ ಮಹಿಳೆಯರ ಬುರ್ಖಾ ತೆಗೆಸಿ, ಗುರುತಿನ ಚೀಟಿ ಪರಿಶೀಲಿಸಿ ಕಿರುಕುಳ ನೀಡಿದ ಹೈದರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರ ವಿರುದ್ಧ FIR ದಾಖಲಾಗಿದೆ.
ಹಳೇ ಹೈದರಾಬಾದ್ ನ ಮತಗಟ್ಟೆಯೊಂದಕ್ಕೆ ಮಾಧವಿ ಲತಾ ಭೇಟಿ ನೀಡಿದ್ದ ವೇಳೆ ಈ ಘಟನೆ ವರದಿಯಾಗಿದೆ. ಮತಗಟ್ಟೆಯ ಬಳಿ ಕುಳಿತಿದ್ದ ಇಬ್ಬರು ಮುಸ್ಲಿಂ ಮಹಿಳೆಯರನ್ನು ಮಾತನಾಡಿಸಿದ್ದ ಮಾಧವಿ ಲತಾ ಅವರು, ಗುರುತಿನ ಚೀಟಿಗಳನ್ನು ಪರಿಶೀಲನೆ ಮಾಡಲು ಮಹಿಳೆಯರ ಬುರ್ಖಾದ ಮುಖಗವಸುವ ತೆಗೆಸಿ ಕಿರುಕುಳ ನೀಡಿದ್ದರು. ವೀಡಿಯೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ವರ್ತನೆಗೆ ಆಕ್ರೋಶ ವ್ಯಕ್ತವಾಗಿತ್ತು.
#WATCH | Telangana: BJP candidate from Hyderabad Lok Sabha constituency, Madhavi Latha visits a polling booth in the constituency. Voting for the fourth phase of #LokSabhaElections2024 is underway. pic.twitter.com/BlsQXRn80C
— ANI (@ANI) May 13, 2024
What's happening here? Who is she to verify the voters? She is not authorized to check and verify the identity of the voters. Only the precising officers can do that.@ECISVEEP, are you still sleeping? #AIMIM #Elections2024
— Shoaib Mohammed (@shoaibpage) May 13, 2024
#LokSabaElections2024 pic.twitter.com/ljubcbPzNc