ಯೂಕೊ ಬ್ಯಾಂಕ್ ಹಗರಣ: ಎಫ್ಐಆರ್ ದಾಖಲಿಸಿಕೊಂಡ ಸಿಬಿಐ; ಮಂಗಳೂರು ಸಹಿತ 13 ಸ್ಥಳಗಳಲ್ಲಿ ಶೋಧ

Update: 2023-12-06 06:09 GMT

ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ: ಈ ವರ್ಷದ ನವೆಂಬರ್ ತಿಂಗಳಲ್ಲಿ ಯೂಕೊ ಬ್ಯಾಂಕ್ ನಲ್ಲಿ ನಡೆದಿದ್ದ ರೂ. 820 ಕೋಟಿ ಮೊತ್ತದ ಸಂಶಯಾಸ್ಪದ ಐಎಂಪಿಎಸ್ ವಹಿವಾಟಿನ ಸಂಬಂಧ ಸಿಬಿಐ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡಿದ್ದು, ವಿವಿಧ ನಗರಗಳ 13 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸೋಮವಾರ ಮಧ್ಯರಾತ್ರಿಯವರೆಗೂ ನಡೆದ ಶೋಧ ಕಾರ್ಯಾಚರಣೆಯು ಕೋಲ್ಕತ್ತಾ ಹಾಗೂ ಮಂಗಳೂರನ್ನೂ ಒಳಗೊಂಡಿತ್ತು ಎಂದು ಅವರು ಹೇಳಿದ್ದಾರೆ.

ಯೂಕೊ ಬ್ಯಾಂಕ್ ತನ್ನೊಂದಿಗೆ ಕೆಲಸ ನಿರ್ವಹಿಸುತ್ತಿರುವ ನೆರವು ತಂತ್ರಜ್ಞರು ಹಾಗೂ ಇನ್ನಿತರ ಅಪರಿಚಿತ ವ್ಯಕ್ತಿಗಳ ವಿರುದ್ಧ ದಾಖಲಿಸಿದ್ದ ದೂರನ್ನು ಆಧರಿಸಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಐಎಂಪಿಎಸ್ ವಹಿವಾಟಿನಲ್ಲಿ ವರ್ಗಾವಣೆಗೊಂಡಿರುವ ಮೊತ್ತವು ಅಂದಾಜು ರೂ. 820 ಕೋಟಿ ಆಗಿದೆ ಎಂದು ಸಿಬಿಐ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಮೊಬೈಲ್ ಫೋನ್ ಗಳು, ಲ್ಯಾಪ್ ಟಾಪ್ ಗಳು, ಕಂಪ್ಯೂಟರ್ ಸಿಸ್ಟಮ್ ಗಳು, ಇಮೇಲ್ ಗಳು ಹಾಗೂ ಡೆಬಿಟ್/ಕ್ರೆಡಿಟ್ ಕಾರ್ಡ್ ಗಳು ಸೇರಿದಂತೆ ವಿದ್ಯುನ್ಮಾನ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

“ನವೆಂಬರ್ 10, 2023ರಿಂದ ನವೆಂಬರ್ 13, 2023ರ ನಡುವೆ ಐಎಂಪಿಎಸ್ ವಾಹಿನಿಯ ಮೂಲಕ ಯೂಕೊ ಬ್ಯಾಂಕ್ ಒಳಗಿನ 41,000 ಖಾತೆದಾರರಿಗೆ ಏಳು ಖಾಸಗಿ ಬ್ಯಾಂಕ್ ಗಳ 14,000 ಖಾತೆದಾರರ ಖಾತೆಗಳಿಂದ ಐಎಂಪಿಎಸ್ ಮೂಲಕ ಹಣದ ವಹಿವಾಟು ನಡೆದಿದೆ ಎಂದು ಆರೋಪಿಸಲಾಗಿದೆ” ಎಂದು ಅವರು ಮಾಹಿತಿ ನೀಡಿದ್ದಾರೆ.

ಮಂಗಳೂರು ನಗರ ಶಾಖೆಗಳಲ್ಲೂ ಸಿಬಿಐ ಶೋಧ

ಯೂಕೊ ಬ್ಯಾಂಕ್ ಖಾತೆಗಳಲ್ಲಿ ಸುಮಾರು ರೂ. 820 ಕೋಟಿ ಮೊತ್ತದ ಐಎಂಪಿಎಸ್ ಅಕ್ರಮಗಳು ನಡೆದಿದೆ ಎಂಬ ಆರೋಪವನ್ನು ಆಧರಿಸಿ ಪ್ರಾಥಮಿಕ ಮಾಹಿತಿ ವರದಿಯನ್ನು ದಾಖಲಿಸಿಕೊಂಡಿರುವ ಸಿಬಿಐ, ದೇಶದ 13 ವಿವಿಧ ಸ್ಥಳಗಳೊಂದಿಗೆ ಮಂಗಳೂರಿನಲ್ಲೂ ಶೋಧ ಕಾರ್ಯಾಚರಣೆ ನಡೆಸಿತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News