ಕೇರಳದಲ್ಲಿ ಎಸ್‌ಡಿಪಿಐ ಬೆಂಬಲವನ್ನು ತಿರಸ್ಕರಿಸಿದ ಕಾಂಗ್ರೆಸ್
Update: 2024-04-04 15:53 GMT
ಕೊಚ್ಚಿ: “ಎಸ್ ಡಿಪಿಐ ಬೆಂಬಲ ಸ್ವೀಕರಿಸಿದರೆ ಉತ್ತರ ಭಾರತದಲ್ಲಿ ಹಿನ್ನಡೆಯಾಗಲಿದೆ ಎಂಬ ಮೌಲ್ಯಮಾಪನ ಆಧರಿಸಿ ಎಸ್ ಡಿಪಿಐ ನಿರ್ಧಾರ ತಿರಸ್ಕರಿಸುವ ನಿರ್ಣಯ ಕೈಗೊಳ್ಳಲಾಗಿದೆ. ಜನರು ಮುಕ್ತವಾಗಿ ಮತ ಚಲಾಯಿಸಬಹುದು. ಕಾಂಗ್ರೆಸ್ಗೆ ಎಸ್ ಡಿಪಿಐ ಬೆಂಬಲ ಬೇಕಾಗಿಲ್ಲ”, ಎಂದು ಕೇರಳ ಕಾಂಗ್ರೆಸ್ ತಿಳಿಸಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ಎಸ್ಡಿಪಿಐ ಹೇಳಿದ ಬಳಿಕ, ಕಾಂಗ್ರೆಸ್ ಪಕ್ಷದಿಂದ ಈ ಹೇಳಿಕೆ ಬಂದಿದೆ.
ಕಾಂಗ್ರೆಸ್ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಕೋಮುವಾದ ಎರಡನ್ನೂ ವಿರೋಧಿಸುತ್ತದೆ. ಎಸ್ಡಿಪಿಐ ನೀಡಿದ ಬೆಂಬಲವೂ ಅದೇ ರೀತಿಯಲ್ಲಿ ಕಂಡುಬರುತ್ತದೆ. ಯುಡಿಎಫ್ ನಾಯಕರ ಚರ್ಚೆಯ ನಂತರ ಎಸ್ಡಿಪಿಐ ಬೆಂಬಲವನ್ನ ತಿರಸ್ಕರಿಸುವ ನಿರ್ಣಯವನ್ನು ನಿರ್ಧರಿಸಲಾಯಿತು ಎಂದು ತಿಳಿದು ಬಂದಿದೆ.