ಕೋಮುವಾದಿ ಹೇಳಿಕೆ ವಿವಾದ: ಲೋಕಸಭೆಯ ವಿಶೇಷ ಹಕ್ಕುಗಳ ಸಮಿತಿ ಸಭೆಗೆ ಗೈರಾದ ಬಿಜೆಪಿ ಸಂಸದ ಬಿಧೂರಿ

Update: 2023-10-10 16:36 GMT

ಹೊಸದಿಲ್ಲಿ: ಬಿಎಸ್ಪಿ ಸಂಸದ ದಾನಿಷ್ ಅಲಿಯವರ ವಿರುದ್ಧ ತನ್ನ ವಿವಾದಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿದಂತೆ ಮಂಗಳವಾರ ಲೋಕಸಭೆಯ ವಿಶೇಷ ಹಕ್ಕುಗಳ ಸಮಿತಿಯ ಮುಂದೆ ಹಾಜರಾಗಬೇಕಿದ್ದ ಬಿಜೆಪಿ ಸಂಸದ ರಮೇಶ ಬಿಧೂರಿ ಅವರು ಪೂರ್ವ ನಿಗದಿತ ಕಾರ್ಯಕ್ರಮಗಳನ್ನು ಉಲ್ಲೇಖಿಸಿ ಗೈರಾಗಿದ್ದರು.

ಗುಜ್ಜರ್ ಸಮುದಾಯಕ್ಕೆ ಸೇರಿದ ಬಿಧೂರಿ ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದಲ್ಲಿದ್ದಾರೆ ಎಂದು ಹೇಳಲಾಗಿದೆ. ಬಿಜೆಪಿಯು ಅವರನ್ನು ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ, ಗುಜ್ಜರ್ಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಟೊಂಕ್ ಜಿಲ್ಲೆಯ ಉಸ್ತುವಾರಿಯನ್ನಾಗಿ ನೇಮಕಗೊಳಿಸಿದೆ.

ರಾಜಸ್ತಾನದಲ್ಲಿ ನ.23ರಂದು ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಸದನದಲ್ಲಿ ಚಂದ್ರಯಾನ-3 ಅಭಿಯಾನ ಕುರಿತು ಚರ್ಚೆ ಸಂದರ್ಭದಲ್ಲಿ ಅನುಚಿತ ವರ್ತನೆಗಾಗಿ ಬಿಧೂರಿ ಮತ್ತು ದಾನಿಷ್ ಅಲಿ ವಿರುದ್ಧ ಹಲವಾರು ಸಂಸದರು ದೂರುಗಳನ್ನು ಸಲ್ಲಿಸಿದ್ದಾರೆ. ಈ ದೂರುಗಳಿಗೆ ಸಂಬಂಧಿಸಿದಂತೆ ‘ಮೌಖಿಕ ಸಾಕ್ಷ’ಕ್ಕಾಗಿ ಲೋಕಸಭೆಯ ವಿಶೇಷ ಹಕ್ಕುಗಳ ಸಮಿತಿಯು ಬಿಧೂರಿಯವರಿಗೆ ಸೂಚಿಸಿತ್ತು. ಹಲವಾರು ಪ್ರತಿಪಕ್ಷ ಸಂಸದರು ಬಿಧೂರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರೆ, ಅಲಿ ಬಿಧೂರಿಯವರನ್ನು ಪ್ರಚೋದಿಸಿದ್ದರು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಯನ್ನೂ ನೀಡಿದ್ದರು ಎಂದು ಕೆಲವು ಬಿಜೆಪಿ ಸದಸ್ಯರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News