ದಿಲ್ಲಿಯಲ್ಲಿ ಉದ್ಯಮಿ ಆತ್ಮಹತ್ಯೆ : ಪತ್ನಿ ಮತ್ತು ಕುಟುಂಬಸ್ಥರ ವಿರುದ್ಧ ಕಿರುಕುಳ ಆರೋಪ
ಹೊಸದಿಲ್ಲಿ: ಕಲ್ಯಾಣ್ ವಿಹಾರ್ ಪ್ರದೇಶದಲ್ಲಿ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿ ಮತ್ತು ಆಕೆಯ ಸಂಬಂಧಿಕರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.
ಪುನೀತ್ ಖುರಾನಾ(40) ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ.
ʼಮಣಿಕಾ ಪಹ್ವಾ ಮತ್ತು ಆಕೆಯ ಕುಟುಂಬಸ್ಥರು ಪುನೀತ್ ಖುರಾನಾಗೆ ಮಾನಸಿಕವಾಗಿ ಚಿತ್ರಹಿಂಸೆ ನೀಡಿದ್ದಾರೆ. ನಿನಗೆ ಏನೂ ಮಾಡಲು ಸಾಧ್ಯವಿಲ್ಲ, ಧೈರ್ಯವಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಿ ಎಂದು ಹೇಳುವ ಮೂಲಕ ಪ್ರಚೋದಿಸಿದ್ದಾರೆ. ಆತ್ಮಹತ್ಯೆಗೆ ಮೊದಲು ಪುನೀತ್ ವೀಡಿಯೊ ಚಿತ್ರೀಕರಿಸಿದ್ದು, ಅದು ಅವರ ಮೊಬೈಲ್ ನಲ್ಲಿದೆ. ಮಾಣಿಕಾ ಮತ್ತು ಅವನ ಹೆತ್ತವರು ಹೇಗೆ ಮಾನಸಿಕವಾಗಿ ಒತ್ತಡ ಹೇರಿದ್ದಾರೆ ಎಂಬುವುದನ್ನು ವೀಡಿಯೊದಲ್ಲಿ ವಿವರಿಸಲಾಗಿದೆ. ಇದಲ್ಲದೆ ಪುನೀತ್ ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ಕೂಡ ಹ್ಯಾಕ್ ಮಾಡಿದ್ದಾರೆ ಎಂದು ಪುನೀತ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಕುರಿತು ಪುನೀತ್ ಖುರಾನ ತಂದೆ ತ್ರಿಲೋಕ್ ಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿದ್ದು, ʼಮಗನ ಸಾವಿಗೆ ಸೊಸೆ ಮತ್ತು ಆಕೆಯ ಸಂಬಂಧಿಕರೇ ಕಾರಣ. ಹಣ ಮತ್ತು ಆಸ್ತಿ ವಿಚಾರವಾಗಿ ಅವರು ನನ್ನ ಮಗನಿಗೆ ಸಾಕಷ್ಟು ಕಿರುಕುಳ ನೀಡಿದ್ದಾರೆ. ಅವರಿಗೆ ಕಠಿಣ ಶಿಕ್ಷೆಯಾಗಬೇಕುʼ ಎಂದು ಹೇಳಿದ್ದಾರೆ.
ವಿಚ್ಛೇದನದ ಬಳಿಕ ಮಗ ಮತ್ತು ಮಾಣಿಕಾ ಚೆನ್ನಾಗಿರಲಿ ಎಂದು ಆಶಿಸಿದ್ದೆ, ಆದರೆ ಅವಳು ನನ್ನ ಮಗನಿಗೆ ಚಿತ್ರಹಿಂಸೆ ನೀಡುತ್ತಿದ್ದಳು ಮತ್ತು ಅವನು ಮೌನವಾಗಿ ನರಳುತ್ತಿದ್ದ. ಇಬ್ಬರು ವ್ಯಾಪಾರದಲ್ಲಿ ಪಾಲುದಾರಿಕೆ ಹೊಂದಿದ್ದರು. ಅವರ ನಡುವೆ ಜಗಳವಾಗುತ್ತಿತ್ತು, ಆದರೆ ಅವನು ನಮ್ಮಲ್ಲಿ ಏನೂ ಮನಬಿಚ್ಚಿ ಹೇಳುತ್ತಿರಲಿಲ್ಲ. ನಾನು ನನ್ನ ಮಗನನ್ನು ಕಳೆದುಕೊಂಡಿದ್ದೇನೆ, ದಯವಿಟ್ಟು ಅವನಿಗೆ ನ್ಯಾಯವನ್ನು ಒದಗಿಸಿ ಇದರಿಂದ ಅವನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಮಾಣಿಕಾ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ಪುನೀತ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ದಂಪತಿಗಳು 2016ರಲ್ಲಿ ವಿವಾಹವಾಗಿದ್ದರು ಮತ್ತು ಕೌಟುಂಬಿಕ ಕಲಹದಿಂದಾಗಿ ಕಳೆದ ಎರಡು ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.