ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿ ಘೋಷಣೆ | ಆದಾಯ ಮಿತಿ 3 ಲಕ್ಷ ರೂ.ಗೆ ಹೆಚ್ಚಳ
Update: 2024-07-23 07:41 GMT
ಹೊಸದಿಲ್ಲಿ : 7ನೇ ಬಾರಿ ಬಜೆಟ್ ಮಂಡಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್‌ನಲ್ಲಿ ಆದಾಯ ಮಿತಿಯನ್ನು 3 ಲಕ್ಷ ರೂ.ಗೆ ಹೆಚ್ಚಳ ಮಾಡಿರುವುದಾಗಿ ಘೋಷಿಸಿದ್ದಾರೆ.
ಹೊಸ ಆದಾಯ ತೆರಿಗೆ ಪದ್ದತಿಯಂತೆ 3 ಲಕ್ಷ ರೂ. ಆದಾಯವರೆಗೆ ಯಾವುದೇ ತೆರಿಗೆ ಇರುವುದಿಲ್ಲ. ಈ ಮೊದಲು 2.5 ಲಕ್ಷ ರೂ. ವರೆಗೆ ಆದಾಯ ತೆರಿಗೆ ಮಿತಿ ಹೇರಲಾಗಿತ್ತು. ಹೊಸ ತೆರಿಗೆ ಪದ್ಧತಿಯಲ್ಲಿ 3ಲಕ್ಷ ರೂ.ವಿನಿಂದ 7ಲಕ್ಷ ರೂ. ವರೆಗಿನ ಆದಾಯಕ್ಕೆ ಶೇ 5ರಷ್ಟು ತೆರಿಗೆ ವಿಧಿಸಲಾಗುತ್ತದೆ. 7ಲಕ್ಷ ರೂ.ವಿನಿಂದ 10ಲಕ್ಷ ರೂ.ವರೆಗೆ ಆದಾಯಕ್ಕೆ ಶೇ 10ರಷ್ಟು, 10 ಲಕ್ಷ ರೂ.ವಿನಿಂದ 12 ಲಕ್ಷ ರೂ.ವರೆಗೆ ಶೇ 15ರಷ್ಟು ತೆರಿಗೆ ವಿಧಸಲಾಗುತ್ತದೆ. 12 ಲಕ್ಷ ರೂ.ವಿನಿಂದ 15 ಲಕ್ಷ ರೂ.ವರೆಗೆ ಶೇ 20ರಷ್ಟು, 15 ಲಕ್ಷ ಮೇಲಿನ ಆದಾಯಕ್ಕೆ ಶೇ 30ರಷ್ಟು ತೆರಿಗೆಯನ್ನು ವಿಧಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ.