ತಮ್ಮ ಕರ್ಮದ ಫಲವಾಗಿ ಬಂಧನಕ್ಕೀಡಾಗಿದ್ದಾರೆ: ಅರವಿಂದ್ ಕೇಜ್ರಿವಾಲ್ ವಿರುದ್ಧ ಅಣ್ಣಾ ಹಝಾರೆ ವಾಗ್ದಾಳಿ

Update: 2024-03-22 08:57 GMT

ಅಣ್ಣಾ ಹಝಾರೆ , ಅರವಿಂದ್ ಕೇಜ್ರಿವಾಲ್ | Photo : ANI 

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿರುವ ಅಣ್ಣಾ ಹಝಾರೆ, ಅವರು ಮಾಡಿದ ಕರ್ಮದ ಫಲವೇ ಅವರ ಬಂಧನ ಎಂದು ವಾಗ್ದಾಳಿ ನಡೆಸಿದ್ದಾರೆ.

“ನನ್ನೊಂದಿಗೆ ಕೆಲಸ ಮಾಡುತ್ತಿದ್ದ, ಮದ್ಯದ ವಿರುದ್ಧ ತಮ್ಮ ಧ್ವನಿಯನ್ನು ಎತ್ತುತ್ತಿದ್ದ ಅರವಿಂದ್ ಕೇಜ್ರಿವಾಲ್ ಇದೀಗ ಮದ್ಯ ನೀತಿಗಳನ್ನು ಮಾಡುತ್ತಿರುವುದರಿಂದ ನಾನು ತೀವ್ರ ಅಸಮಾಧಾನಗೊಂಡಿದ್ದೇನೆ. ಅವರ ಕರ್ಮದ ಫಲದಿಂದಾಗಿಯೇ ಅವರು ಬಂಧನಕ್ಕೀಡಾಗಿದ್ದಾರೆ. ಆದರೆ, ಅವರೇನು ಮಾಡುತ್ತಾರೆ? ಅಧಿಕಾರದ ಮುಂದೆ ಯಾವುದೂ ನಡೆಯುವುದಿಲ್ಲ. ಈಗ ಅವರ ಬಂಧನವಾಗಿದೆ. ಇನ್ನು ಮುಂದೆ ಏನೇ ನಡೆದರೂ, ಅದು ಕಾನೂನಿನ ರೀತಿ ನಡೆಯಲಿದೆ” ಎಂದು ಅಣ್ಣಾ ಹಝಾರೆ ಅಭಿಪ್ರಾಯ ಪಟ್ಟಿದ್ದಾರೆ.

ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದ ವಿರುದ್ಧ 2011ರಲ್ಲಿ ಅಣ್ಣಾ ಹಝಾರೆ ಜೊತೆಗೂಡಿದ್ದ ಅರವಿಂದ್ ಕೇಜ್ರಿವಾಲ್, ಅದರ ಖ್ಯಾತಿಯ ಬೆನ್ನೇರಿ 2012ರಲ್ಲಿ ತಮ್ಮದೇ ನೂತನ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದರು ಹಾಗೂ ಮುಖ್ಯಮಂತ್ರಿ ಹುದ್ದೆಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News