'ರಜೆಯಲ್ಲಿದ್ದಾಗ ಸಮಾಜಸೇವೆ ಮಾಡಿ': ಸೈನಿಕರಿಗೆ ಸಲಹೆ ನೀಡಿದ ಭಾರತೀಯ ಸೇನೆ

Update: 2023-09-04 04:48 GMT

ಹೊಸದಿಲ್ಲಿ: ಸೈನಿಕರು ರಜೆಯ ಮೇಲಿದ್ದಾಗ ಸಮಾಜ ಸೇವಾ ಕಾರ್ಯಗಳನ್ನು ಕೈಗೊಳ್ಳುವಂತೆ ಭಾರತೀಯ ಸೇನೆ ಸಲಹೆ ಮಾಡಿದೆ. ದೇಶ ನಿರ್ಮಾಣದ ಕಾರ್ಯದಲ್ಲಿ ಕೊಡುಗೆ ನೀಡುವಂತೆ ಸೂಚಿಸಿದೆ.

ಸ್ವಚ್ಛಭಾರತ ಅಭಿಯಾನ ಮತ್ತು ಸರ್ವಶಿಕ್ಷಣ ಅಭಿಯಾನದಂಥ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಸ್ಥಳೀಯರಿಗೆ ಶಿಕ್ಷಣ ನೀಡಬೇಕು. ನೈರ್ಮಲ್ಯ, ಸ್ವಚ್ಛತೆ, ರಸ್ತೆ ಸುರಕ್ಷತೆಯಿಂದ ಹಿಡಿದು ವಿವಿಧ ವಿಷಯಗಳ ಬಗ್ಗೆ ಪ್ರಾಥಮಿಕ ಶಾಲೆಗಳಲ್ಲಿ ಉಪನ್ಯಾಸ ನೀಡಬೇಕು ಎಂದು ಸೂಚಿಸಲಾಗಿದೆ.

ರಜೆನ್ನು ಸದ್ಬಳಕೆ ಮಾಡಿಕೊಳ್ಳುವುದು ಮತ್ತು ರಾಷ್ಟ್ರನಿರ್ಮಾಣಕ್ಕೆ ಕೊಡುಗೆ ನೀಡುವ ಸಂಬಂಧ ಸೇನೆಯ ಸಮಾರಂಭಗಳು ಮತ್ತು ಕಲ್ಯಾಣ ನಿರ್ದೇಶನಾಲಯ ಈ ಶಿಫಾರಸ್ಸುಗಳನ್ನು ಮಾಡಿದೆ.

ರಜೆಯಲ್ಲಿ ತೆರಳುವ ಯಾವುದೇ ಸೈನಿಕರು ತಮ್ಮ ಆಸಕ್ತಿಯ ವಿಷಯವನ್ನು ಆಯ್ಕೆ ಮಾಡಿಕೊಂಡು ದೇಶ ನಿರ್ಮಾಣದ ಸೇನಾಕಾರ್ಯಕ್ಕೆ ಕೊಡುಗೆ ನೀಡಬೇಕು ಎಂದು ಪತ್ರದಲ್ಲಿ ವಿವರಿಸಲಾಗಿದೆ. ಈ ಬಗ್ಗೆ ಪ್ರತಿ ಮೂರು ತಿಂಗಳಿಗೊಮ್ಮೆ ಈ ಬಗ್ಗೆ ಅಭಿಪ್ರಾಯ ನೀಡಬೇಕು ಎಂದು ಸೂಚಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News