ಗಡುವಿನ ಒಳಗೆ ಶುಲ್ಕ ಪಾವತಿಗೆ ವಿಫಲ | ದಲಿತ ಯುವಕನಿಗೆ ಪ್ರವೇಶಾತಿ ನೀಡುವಂತೆ ಐಐಟಿ ಧನ್‌ಬಾದ್‌ಗೆ ಸುಪ್ರೀಂ ನಿರ್ದೇಶ
ಹೊಸದಿಲ್ಲಿ : ಗಡುವಿನ ಒಳಗೆ ಶುಲ್ಕ ಠೇವಣಿ ಇರಿಸಲು ವಿಫಲವಾದ ಬಳಿಕ ತನ್ನ ಸೀಟು ಕಳೆದುಕೊಂಡ ದಲಿತ ಯುವಕನಿಗೆ ಪ್ರವೇಶಾತಿ ನೀಡುವಂತೆ ಸುಪ್ರೀಂ ಕೋರ್ಟ್ ಐಐಟಿ ಧನ್‌ಬಾದ್‌ಗೆ ನಿರ್ದೇಶಿಸಿದೆ.
ಈ ಯುವಕ ಜೆಇಇ ಅಡ್ವಾನ್ಸ್ ಪರೀಕ್ಷೆಯನ್ನು ತನ್ನ ಕೊನೆಯ ಪ್ರಯತ್ನದಲ್ಲಿ ಉತ್ತೀರ್ಣನಾಗಿದ್ದ.
ಗಡುವಿನಲ್ಲಿ ಶುಲ್ಕ ಠೇವಣಿ ಇರಿಸಲು ವಿಫಲವಾದ ಬಳಿಕ ತನ್ನ ಸೀಟು ಕಳೆದುಕೊಂಡ ದಲಿತ ಯುವಕನಿಗೆ ಪ್ರವೇಶಾತಿ ಒದಗಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಐಐಟಿ ಧನ್‌ಬಾದ್ (ಈ ಹಿಂದಿನ ಇಂಡಿಯನ್ ಸ್ಕೂಲ್ ಆಫ್ ಮೈನ್ಸ್)ಗೆ ನಿರ್ದೇಶಿಸಿದೆ.
ಪ್ರತಿಷ್ಠಿತ ಜೆಇಇ ಅಡ್ವಾನ್ಸ್ ಪರೀಕ್ಷೆಯನ್ನು ಕೊನೆಯ ಪ್ರಯತ್ನದಲ್ಲಿ ಉತ್ತೀರ್ಣರಾದ ಬಳಿಕ ಗಡುವಿನ ಒಳಗೆ ಸ್ವೀಕೃತಿ ಶುಲ್ಕ 17,500 ಠೇವಣಿ ಇರಿಸಲು ವಿಫಲವಾದ ಬಳಿಕ ಬಡ ದಲಿತ ಕುಟುಂಬದ ಯುವಕ ಅತುಲ್ ಕುಮಾರ್ ಐಐಟಿ ಧನ್‌ಬಾದ್‌ನಲ್ಲಿ ಕಷ್ಟಪಟ್ಟು ಪಡೆದುಕೊಂಡಿದ್ದ ಸೀಟನ್ನು ಕಳೆದುಕೊಂಡಿದ್ದ.
ಈ ಹಿನ್ನೆಲೆಯಲ್ಲಿ ದಲಿತ ಯುವಕನಿಗೆ ನೆರವು ನೀಡುವುದಾಗಿ ಸುಪ್ರೀಂ ಕೋರ್ಟ್ ಕೆಲವು ದಿನಗಳ ಹಿಂದೆ ಭರವಸೆ ನೀಡಿತ್ತು.