ಹೈದರಾಬಾದ್‌ ಬಳಿ ಫಲಕ್‌ನುಮಾ ಎಕ್ಸ್‌ಪ್ರೆಸ್‌ ರೈಲಿಗೆ ಹಬ್ಬಿದ ಬೆಂಕಿ: ಆತಂಕಗೊಂಡ ಪ್ರಯಾಣಿಕರು

ರೈಲ್ವೇ ಅಧಿಕಾರಿಗಳ ಪ್ರಕಾರ, ರೈಲು ಸಂಖ್ಯೆ 12703 (ಹೌರಾ - ಸಿಕಂದರಾಬಾದ್) ಫಲುಕ್ನಾಮಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನ ಎರಡು ಸ್ಲೀಪರ್ ಕ್ಲಾಸ್ ಕೋಚ್‌ಗಳು (S4 ಮತ್ತು S5) ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿವೆ. ಘಟನೆ ನಡೆದ ತಕ್ಷಣ ರೈಲನ್ನು ನಿಲ್ಲಿಸಲಾಯಿತು. ಆದರೆ, ಸದ್ಯಕ್ಕೆ ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ.

Update: 2023-07-07 12:29 GMT
Editor : Muad | Byline : ವಾರ್ತಾಭಾರತಿ

ಹೈದರಾಬಾದ್: ಯಾದಾದ್ರಿ ಭುವನಗಿರಿ ಜಿಲ್ಲೆಯ ಪಗಿಡಿಪಲ್ಲಿ ಬಳಿ ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಫಲಕ್ನುಮಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ಗೆ ಭಾರಿ ಬೆಂಕಿ ಹೊತ್ತಿಕೊಂಡಿದ್ದು, ಹೈದರಾಬಾದ್‌ ತಲುಪಲು ಕೇವಲ ಒಂದು ಗಂಟೆಯಿರುವಾಗ ಸಂಭವಿಸಿದ ಈ ಅನಾಹುತದಿಂದ ಪ್ರಯಾಣಿಕರು ಭಯಭೀತರಾಗುವಂತಾಯಿತು.

ರೈಲ್ವೇ ಅಧಿಕಾರಿಗಳ ಪ್ರಕಾರ, ರೈಲು ಸಂಖ್ಯೆ 12703 (ಹೌರಾ - ಸಿಕಂದರಾಬಾದ್) ಫಲುಕ್ನಾಮಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನ ಎರಡು ಸ್ಲೀಪರ್ ಕ್ಲಾಸ್ ಕೋಚ್‌ಗಳು (S4 ಮತ್ತು S5) ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿವೆ. ಘಟನೆ ನಡೆದ ತಕ್ಷಣ ರೈಲನ್ನು ನಿಲ್ಲಿಸಲಾಯಿತು. ಆದರೆ, ಸದ್ಯಕ್ಕೆ ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ.

ಘಟನೆ ನಡೆದ ಕೂಡಲೇ ಎಸ್‌ಸಿಆರ್‌ ಜಿಎಂ ಅರುಣ್‌ ಕುಮಾರ್‌ ಜೈನ್‌ ಮತ್ತು ಇತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಎರಡು ಬೋಗಿಗಳಲ್ಲಿ ಮಾತ್ರ ಬೆಂಕಿ ಕಾಣಿಸಿಕೊಂಡಿದ್ದರೂ, ಅದು ಬೇಗನೆ ಇತರ ಬೋಗಿಗಳಿಗೆ ಹರಡಿತು ಮತ್ತು ಅವುಗಳಲ್ಲಿ ನಾಲ್ಕು ಹಾನಿಗೊಳಗಾಗಿವೆ ಎಂದು ತಿಳಿದು ಬಂದಿದೆ.

ಇತರ ಬೋಗಿಗಳಿಗೆ ಬೆಂಕಿ ಹರಡುವುದನ್ನು ತಪ್ಪಿಸಲು ಅಧಿಕಾರಿಗಳು ಬೋಗಿಗಳನ್ನು ಬೇರ್ಪಡಿಸಿದ್ದಾರೆ. ಮತ್ತೊಂದೆಡೆ, ಪ್ರತ್ಯೇಕ ಸ್ಥಳದಲ್ಲಿ ಘಟನೆ ನಡೆದಿದ್ದರಿಂದ ಅಗ್ನಿಶಾಮಕ ದಳಕ್ಕೆ ಸ್ಥಳಕ್ಕಾಗಮಿಸುವುದು ಕಷ್ಟಕರವಾಗಿತ್ತು.

ರೈಲನ್ನು ಸ್ಥಗಿತಗೊಳಿಸಲಾಗಿದ್ದು, ಪ್ರಯಾಣಿಕರನ್ನು ಸಿಕಂದರಾಬಾದ್‌ಗೆ ಸಾಗಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು thenewindianexpress ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Muad

contributor

Byline - ವಾರ್ತಾಭಾರತಿ

contributor

Similar News