ಮನೆಗಳಿಗೆ ಬೆಂಕಿ; ಒಂದೇ ಕುಟುಂಬದ ಐವರು ಸಜೀವ ದಹನ

Update: 2023-11-13 17:00 GMT

ಸಾಂದರ್ಭಿಕ ಚಿತ್ರ

ದಿಮಾಪುರ, ನ.13: ನಾಗಾಲ್ಯಾಂಡ್ ನ ದಿಮಾಪುರ ಜಿಲ್ಲೆಯ ನಹರಬಾರಿ ಪ್ರದೇಶದಲ್ಲಿ ರವಿವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸಜೀವ ದಹನಗೊಂಡಿದ್ದಾರೆ.

ರಾತ್ರಿ ಸುಮಾರು 10:45ಕ್ಕೆ ನಾಗಾಯೇತರ ಸಮುದಾಯದ ಜನರು ವಾಸವಾಗಿರುವ ಹುಲ್ಲಿನ ಗುಡಿಸಲುಗಳ ಸಾಲುಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ದೀಪಾವಳಿ ಸಂಭ್ರಮದಲ್ಲಿ ಪಟಾಕಿಗಳನ್ನು ಸಿಡಿಸಿದ್ದರಿಂದ ಬೆಂಕಿಯು ಹೊತ್ತಿಕೊಂಡಿರುವ ಸಾಧ್ಯತೆಯಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೋರ್ವರು ತಿಳಿಸಿದರು. ಆದಾಗ್ಯೂ ತನಿಖೆಯ ಬಳಿಕವೇ ಬೆಂಕಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದರು.

ಬೆಂಕಿಯಿಂದಾಗಿ ಸುಮಾರು 50 ಕುಟುಂಬಗಳು ಬಾಧಿತಗೊಂಡಿವೆ. ಆರು ಅಗ್ನಿಶಾಮಕ ಯಂತ್ರಗಳನ್ನು ಬಳಸಲಾಗಿದ್ದು,ಎರಡು ಗಂಟೆಗಳ ಬಳಿಕ ಬೆಂಕಿಯನ್ನು ಆರಿಸಲು ಸಾಧ್ಯವಾಗಿತ್ತು ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News