ʼನಾಯಕನಾಗುವುದೊಂದೇ ಗುರಿಯಾಗಿದ್ದರೆ ಕೋಮು ಸಂಘರ್ಷಗಳು ಸರಿಯಲ್ಲʼ: ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್

Update: 2024-12-20 21:17 IST
ʼನಾಯಕನಾಗುವುದೊಂದೇ ಗುರಿಯಾಗಿದ್ದರೆ ಕೋಮು ಸಂಘರ್ಷಗಳು ಸರಿಯಲ್ಲʼ: ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್

Photo | PTI

  • whatsapp icon

ಹೊಸದಿಲ್ಲಿ: ನಾಯಕನಾಗುವುದೊಂದೇ ಗುರಿಯಾಗಿದ್ದರೆ, ಕೋಮು ಸಂಘರ್ಷಗಳು ಸರಿಯಲ್ಲ ಎಂದು ಶ್ರೀರಾಮ ಜನ್ಮಭೂಮಿ ದೇವಸ್ಥಾನದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಶುಕ್ರವಾರ ಹೇಳಿದ್ದಾರೆ. ಭಾರತದಲ್ಲಿ ಹೆಚ್ಚುತ್ತಿರುವ ಕೋಮು ಘರ್ಷಣೆಗಳನ್ನು ಮೋಹನ್ ಭಾಗವತ್ ಖಂಡಿಸಿದ ಬೆನ್ನಲ್ಲೇ ಸ್ವಾಮಿಜಿಯ ಈ ಮಹತ್ತರ ಹೇಳಿಕೆ ಹೊರಬಿದ್ದಿದೆ.

ದೇವಸ್ಥಾನ ಮತ್ತು ಮಸೀದಿಯ ನಡುವಿನ ವಿವಾದವು ಕೋಮು ಸಂಘರ್ಷವಾಗಿದೆ. ಅಂತಹ ಸಂಘರ್ಷಗಳು ಹೆಚ್ಚಾಗುತ್ತಿದ್ದಂತೆ, ಕೆಲವೇ ಜನರು ನಾಯಕರಾಗುತ್ತಿದ್ದಾರೆ, ನಾಯಕನಾಗುವುದೊಂದೇ ಗುರಿಯಾಗಿದ್ದರೆ, ಅಂತಹ ಸಂಘರ್ಷಗಳು ಸರಿಯಲ್ಲ. ನಾಯಕನಾಗುವ ಉದ್ದೇಶದಿಂದ ಸಂಘರ್ಷ ಪ್ರಾರಂಭಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ದೇಶದಲ್ಲಿ ಹಲವೆಡೆ ಮಂದಿರ-ಮಸೀದಿಗಳ ವಿವಾದ ಭುಗಿಲೆದ್ದ ಬಗ್ಗೆ ಮೋಹನ್ ಭಾಗವತ್ ಕಳವಳ ವ್ಯಕ್ತಪಡಿಸಿರುವ ಬೆನ್ನಲ್ಲೇ ಆಚಾರ್ಯ ಸತ್ಯೇಂದ್ರ ದಾಸ್ ಈ ಮಹತ್ವದ ಹೇಳಿಕೆ ನೀಡಿದ್ದಾರೆ.

ಪುಣೆಯಲ್ಲಿ “ವಿಶ್ವಗುರು ಭಾರತ” ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, ಭಾರತೀಯರು ಹಿಂದಿನ ತಪ್ಪುಗಳಿಂದ ಕಲಿಯಬೇಕು ಮತ್ತು ವಿವಾದವನ್ನು ತಪ್ಪಿಸುವ ಮೂಲಕ ತಮ್ಮ ದೇಶವನ್ನು ಜಗತ್ತಿಗೆ ಮಾದರಿಯನ್ನಾಗಿ ಮಾಡಲು ಶ್ರಮಿಸಬೇಕು. ರಾಮ ಮಂದಿರವು ನಂಬಿಕೆಯ ವಿಷಯವಾಗಿದೆ ಮತ್ತು ಹಿಂದೂಗಳು ಅದನ್ನು ನಿರ್ಮಿಸಬೇಕು ಎಂದು ಬಯಸಿದ್ದರು. ದ್ವೇಷದಿಂದ ಕೆಲವು ಧಾರ್ಮಿಕ ಕೇಂದ್ರಗಳಲ್ಲಿ ಹೊಸದಾಗಿ ವಿವಾದವು ಭುಗಿಲೆದ್ದಿರುವುದು ಸ್ವೀಕಾರಾರ್ಹವಲ್ಲ, ರಾಮಮಂದಿರದಂತಹ ವಿವಾದವನ್ನು ಎಲ್ಲೂ ಸೃಷ್ಟಿಸಬೇಡಿ ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News