ಐಐಟಿ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ: ವಾರಣಾಸಿ ಪೋಲಿಸರಿಂದ ಮೂವರ ಬಂಧನ

Update: 2023-12-31 17:21 GMT

ಸಾಂದರ್ಭಿಕ ಚಿತ್ರ| (Photo: PTI)

ವಾರಣಾಸಿ: ಬನಾರಸ್ ಹಿಂದು ವಿವಿ ಕ್ಯಾಂಪಸ್ ನಲ್ಲಿ ಐಐಟಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಸ್ಥಳೀಯ ಪೋಲಿಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಕುನಾಲ್ ಪಾಂಡೆ, ಆನಂದ್ ಅಲಿಯಾಸ್ ಅಭಿಷೇಕ್ ಚೌಹಾಣ್ ಮತ್ತು ಸಕ್ಷಮ್ ಪಟೇಲ್ ಎಂದು ಗುರುತಿಸಲಾಗಿದೆ ಎಂದು ಲಂಕಾ ಪೋಲಿಸ್ ಠಾಣಾಧಿಕಾರಿ ಶಿವಕಾಂತ್ ಮಿಶ್ರಾ ತಿಳಿಸಿದರು.

ನ.1ರಂದು ರಾತ್ರಿ ಅತ್ಯಾಚಾರ ಘಟನೆ ನಡೆದಿತ್ತು ಎನ್ನಲಾಗಿದೆ. ತಾನು ಸ್ನೇಹಿತನ ಜೊತೆ ಹಾಸ್ಟೆಲ್ ನಿಂದ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದಿದ್ದ ಮೂವರು ವ್ಯಕ್ತಿಗಳು ತನ್ನ ಸ್ನೇಹಿತನನ್ನು ಬೇರ್ಪಡಿಸಿದ ಬಳಿಕ ತನ್ನನ್ನು ಕ್ಯಾಂಪಸ್ ನ ಮೂಲೆಗೆ ಎಳೆದೊಯ್ದು ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತ ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾಳೆ. 

ಬಳಿಕ ತನ್ನನ್ನು ವಿವಸ್ತ್ರಗೊಳಿಸಿ ವೀಡಿಯೊ ಚಿತ್ರೀಕರಿಸಿ ಫೋಟೊಗಳನ್ನು ತೆಗೆದುಕೊಂಡಿದ್ದರು. 15 ನಿಮಿಷಗಳ ಬಳಿಕ ತನ್ನ ಫೋನ್ ನಂಬರ್ ಪಡೆದುಕೊಂಡು ತನ್ನನ್ನು ಹೋಗಲು ಬಿಟ್ಟಿದ್ದರು ಎಂದೂ ವಿದ್ಯಾರ್ಥಿನಿ ದೂರಿನಲ್ಲಿ ಹೇಳಿದ್ದಾಳೆ.

ಆರೋಪಿಗಳ ವಿರುದ್ಧ ಐಪಿಸಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News