ಗುಜರಾತ್ ನಲ್ಲಿ ಲಘು ಭೂಕಂಪ
Update: 2025-01-01 16:05 GMT
ಅಹ್ಮದಾಬಾದ್ : ಗುಜರಾತ್ನ ಕಚ್ಛ್ ಜಿಲ್ಲೆಯಲ್ಲಿ ರಿಕ್ಟರ್ ಮಾಪಕದಲ್ಲಿ 3.2 ತೀವ್ರತೆಯ ಭೂಕಂಪ ಬುಧವಾರ ಬೆಳಗ್ಗೆ ಸಂಭವಿಸಿದೆ ಎಂದು ಭೂಕಂಪ ಸಂಶೋಧನ ಸಂಸ್ಥೆ (ಐಎಸ್ಆರ್) ತಿಳಿಸಿದೆ.
ಯಾವುದೇ ಪ್ರಾಣ ಅಥವಾ ಸೊತ್ತುಗಳಿಗೆ ಹಾನಿ ಉಂಟಾದ ಬಗ್ಗೆ ವರದಿಯಾಗಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ.
ಭೂಕಂಪ ಬೆಳಗ್ಗೆ 10.24ಕ್ಕೆ ಸಂಭವಿಸಿತು. ಬಚಾವುದ ಉತ್ತರ ಈಶಾನ್ಯದಿಂದ 23 ಕಿ.ಮೀ. ದೂರದಲ್ಲಿ ಈ ಭೂಕಂಪ ಕೇಂದ್ರವನ್ನು ಹೊಂದಿತ್ತು ಎಂದು ಗಾಂಧಿನಗರ ಮೂಲದ ಐಎಸ್ಆರ್ ತಿಳಿಸಿದೆ.