ಹರ್ಯಾಣ ವಿಧಾನಸಭಾ ಚುನಾವಣೆ 2024 | ಕಾಂಗ್ರೆಸ್ ನಂತಲ್ಲ, ಬಿಜೆಪಿಯು ತನ್ನ ಭರವಸೆಗಳನ್ನು ಪೂರೈಸಿದೆ : ಮುಖ್ಯಮಂತ್ರಿ ಸೈನಿ

Update: 2024-08-26 14:12 GMT

 ನಯಾಬ್ ಸಿಂಗ್ ಸೈನಿ  | PC : PTI 

ಚಂಡೀಗಢ : ಬಿಜೆಪಿಯು ತನ್ನ ಭರವಸಗಳನ್ನು ಈಡೇರಿಸಿದೆ ಎಂದು ಸೋಮವಾರ ಹರ್ಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಹೇಳಿದ್ದಾರೆ. ಬಿಜೆಪಿ ಪಕ್ಷವು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಹಲವಾರು ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದೆ ಎಂದೂ ಅವರು ಹೇಳಿದ್ದಾರೆ.

ಅಧಿಕಾರದಲ್ಲಿದ್ದಾಗ ತನ್ನ ಭರವಸೆಗಳನ್ನು ಈಡೇರಿಸದ ಕಾಂಗ್ರೆಸ್ ನಂತಲ್ಲದೆ, ಬಿಜೆಪಿಯು ತನ್ನ ಭರವಸೆಗಳನ್ನು ಪೂರೈಸಿದೆ ಎಂದು ಅವರು ತಿಳಿಸಿದ್ದಾರೆ.

ರೋಹ್ಟಕ್ ನಲ್ಲಿ ಪಕ್ಷದ ರಾಜ್ಯ ಚುನಾವಣಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸೈನಿ, ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರಲು ಜನರು ಈಗಾಗಲೇ ಮನಸ್ಸು ಮಾಡಿದ್ದಾರೆ ಎಂದು ಪ್ರತಿಪಾದಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರಕಾರವು ಸಮಾನ ಅಭಿವೃದ್ಧಿಯನ್ನು ಮಾಡಿದ್ದು, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಉದ್ಯೋಗ ನೀಡಿಕೆಯಲ್ಲಿನ ವಶೀಲಿಬಾಜಿಯ ಕಾರಣಕ್ಕೆ ಯುವಜನರು ಆ ಪಕ್ಷದ ಮೇಲೆ ಭರವಸೆ ಕಳೆದುಕೊಂಡರು ಎಂದು ದೂಷಿಸಿದರು.

ಅಕ್ಟೋಬರ್ 1ರಂದು ನಡೆಯಲಿರುವ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಸತತ ಮೂರನೆಯ ಬಾರಿ ಅಧಿಕಾರದ ಗದ್ದುಗೆ ಹಿಡಿಯುವತ್ತ ಬಿಜೆಪಿ ಕಣ್ಣು ನೆಟ್ಟಿದೆ. ಚುನಾವಣಾ ಫಲಿತಾಂಶವು ಅಕ್ಟೋಬರ್ 4ರಂದು ಘೋಷಣೆಯಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News