‘ಸೋದರರ ಸವಾಲ್’ಗೆ ಸಾಕ್ಷಿಯಾದ ಮಧ್ಯಪ್ರದೇಶದ ಹೋಶಂಗಾಬಾದ್ ಕ್ಷೇತ್ರ

Update: 2023-12-03 14:18 GMT

ಸೀತಾಶರಣ ಶರ್ಮಾ | Photo: PTI

ಭೋಪಾಲ (ಮ.ಪ್ರ): ಮಧ್ಯಪ್ರದೇಶದ ಹೋಶಂಗಾಬಾದ್ (ನರ್ಮದಾಪುರಂ) ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯು ‘ಸೋದರರ ಸವಾಲ್’ಗೆ ಸಾಕ್ಷಿಯಾಗಿತ್ತು. ಮಧ್ಯಪ್ರದೇಶ ವಿಧಾನಸಭೆಯ ಮಾಜಿ ಸ್ಪೀಕರ್ ಹಾಗೂ ಹಾಲಿ ಶಾಸಕ, ಬಿಜೆಪಿಯ ಸೀತಾಶರಣ ಶರ್ಮಾ ಅವರು 15,000ಕ್ಕೂ ಅಧಿಕ ಮತಗಳಿಂದ ಗೆದ್ದಿದ್ದು, ಅವರ ವಿರುದ್ಧ ಕಣದಲ್ಲಿದ್ದ ಸೋದರ, ಕಾಂಗ್ರೆಸ್ ನ ಗಿರಿಜಾಶಂಕರ್ ಶರ್ಮಾ 32,944 ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಸೀತಾಶರಣ ಶರ್ಮಾ (72,391 ಮತಗಳು)ರ ನಿಕಟ ಪ್ರತಿಸ್ಪರ್ಧಿಯಾಗಿದ್ದ ಪಕ್ಷೇತರ ಅಭ್ಯರ್ಥಿ ಭಗವತಿ ಪ್ರಸಾದ ಚೌರಿ 56,831 ಮತಗಳನ್ನು ಗಳಿಸಿದ್ದಾರೆ.

ಸೀತಾಶರಣ ಶರ್ಮಾ 2013ರಿಂದಲೂ ಹೋಶಂಗಾಬಾದ್ ಶಾಸಕರಾಗಿದ್ದಾರೆ.

ಸೀತಾಶರಣ ಶರ್ಮಾ ತನ್ನ ಸೋದರ ಕಣಕ್ಕಿಳಿದ ಬಳಿಕ ಸಾರ್ವಜನಿಕವಾಗಿ ಮುಜುಗರದ ಮುಖಾಮುಖಿಯನ್ನು ತಪ್ಪಿಸಲು ಮತದಾನದ ದಿನಾಂಕವಾಗಿದ್ದ ನ.17ರವರೆಗೆ ಅವರನ್ನು ನೋಡಿಯೇ ಇರಲಿಲ್ಲ.

ಬಿಜೆಪಿ ಸದಸ್ಯರಾಗಿದ್ದ ಗಿರಿಜಾಶಂಕರ ಶರ್ಮಾ ಪಕ್ಷದಿಂದ ಚುನಾವಣಾ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಸೆಪ್ಟಂಬರ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು. ಅವರು ಹಿಂದೆ 2003ರಲ್ಲಿ ಇಟಾರ್ಸಿಯಿಂದ ಮತ್ತು 2008ರಲ್ಲಿ ಹೋಶಂಗಾಬಾದ್ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News