ಹೊಸೂರು ವಿಮಾನ ನಿಲ್ದಾಣಕ್ಕೆ ಎರಡು ಸ್ಥಳಗಳನ್ನು ಶಾರ್ಟ್ ಲಿಸ್ಟ್ ಮಾಡಿದ ಸರಕಾರ
ಚೆನ್ನೈ: ʼತನೇಜಾ ಏರೋಸ್ಪೇಸ್ ಮತ್ತು ಏವಿಯೇಷನ್ʼ ಮಾಲಿಕತ್ವದ ಖಾಸಗಿ ವಿಮಾನ ನಿಲ್ದಾಣದಿಂದ 10ಕಿ.ಮೀ ದೂರದಲ್ಲಿರುವ ಎರಡು ಸ್ಥಳಗಳನ್ನು ತಮಿಳುನಾಡು ಸರ್ಕಾರವು ಹೊಸೂರ್ ವಿಮಾನ ನಿಲ್ದಾಣ ನಿರ್ಮಾಣದ ಕುರಿತು ಅಧ್ಯಯನಕ್ಕಾಗಿ ಶಾರ್ಟ್ ಲಿಸ್ಟ್ ಮಾಡಿದೆ.
ರಾಜ್ಯ ಸರ್ಕಾರದ ಮನವಿಯ ಮೇರೆಗೆ ಈ ವರ್ಷದ ಸೆಪ್ಟೆಂಬರ್ ನಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ(ಎಎಐ) ಸಮೀಕ್ಷೆ ನಡೆಸಿದ ಐದು ಸ್ಥಳಗಳಿಂದ ಈ ಸೈಟ್ ಗಳನ್ನು ಆಯ್ಕೆ ಮಾಡಿದೆ.
ಅಧ್ಯಯನ ಮಾಡಿದ ಸ್ಥಳಗಳಲ್ಲಿ ತೊಗರೈ ಅಗ್ರಹಾರ, ದಸಪಲ್ಲಿ ಮತ್ತು ಶೂಲಗಿರಿ ಸೇರಿವೆ. ಇದು ಬೆಂಗಳೂರಿನಿಂದ ಕೇವಲ 40 ಕಿ.ಮೀ ದೂರದಲ್ಲಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಸ್ಥಳಗಳ ಪರಿಶೀಲನೆಯ ವರದಿಯನ್ನು ಸಲ್ಲಿಸಿದ ನಂತರ, ತಮಿಳುನಾಡು ಸರ್ಕಾರವು ಈ ಕುರಿತು ಚರ್ಚೆಗಳನ್ನು ನಡೆಸಿದೆ.
“ನಾವು ಎಲ್ಲಾ ಐದು ಸ್ಥಳಗಳನ್ನು ಮೌಲ್ಯಮಾಪನ ಮಾಡಿದ್ದೇವೆ ಮತ್ತು ಅವುಗಳಲ್ಲಿ ಮೂರು ಸ್ಥಳಗಳು ವಿಮಾನ ನಿಲ್ದಾಣವನ್ನು ನಿರ್ಮಿಸಲು ಸೂಕ್ತವಲ್ಲ ಎಂದು ಕಂಡುಕೊಂಡಿದ್ದೇವೆ. ಒಂದು ಸ್ಥಳ ಜಲಾಶಯಕ್ಕೆ ಹತ್ತಿರದಲ್ಲಿದೆ ಮತ್ತು ಉಳಿದ ಎರಡರಲ್ಲಿ ಒಂದಲ್ಲ ಒಂದು ಸಮಸ್ಯೆ ಇತ್ತು. ನಾವು ಎರಡು ಸ್ಥಳಗಳನ್ನು ಶಾರ್ಟ್ ಲಿಸ್ಟ್ ಮಾಡಿದ್ದೇವೆ. ಅದರಲ್ಲಿ ಒಂದು ಅಸ್ತಿತ್ವದಲ್ಲಿರುವ ವಿಮಾನ ನಿಲ್ಧಾಣದ ಬಳಿ, ಇನ್ನೊಂದು ಹೊಸೂರಿನ ದಕ್ಷಿಣಕ್ಕೆ 10 ಕಿಮೀ ದೂರದಲ್ಲಿದೆʼ ಎಂದು ಮೂಲಗಳು ತಿಳಿಸಿರುವ ಬಗ್ಗೆ Deccan Herald ವರದಿ ಮಾಡಿದೆ.
ನಾವು ಎರಡು ಸ್ಥಳಗಳನ್ನು ಮತ್ತಷ್ಟು ಅಧ್ಯಯನ ಮಾಡಬೇಕಿದೆ. ಈ ಎರಡು ಸ್ಥಳಗಳಲ್ಲಿ ಲಭ್ಯವಿರುವ ಸರ್ಕಾರಿ ಭೂಮಿ ಮತ್ತು ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಬೇಕಾದ ಖಾಸಗಿ ಜಮೀನಿನ ವಿವರಗಳನ್ನು ಕೇಳಿದ್ದೇವೆ. ನಾವು ಎರಡು ಜಮೀನಿನಲ್ಲಿ ಒಂದನ್ನು ಆಯ್ಕೆ ಮಾಡುವ ಮೊದಲು ಹೆಚ್ಚಿನ ಸಮೀಕ್ಷೆ ಮತ್ತು ಅಧ್ಯಯನವನ್ನು ಮಾಡಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.