ಜಮ್ಮು-ಕಾಶ್ಮೀರ | ಇಬ್ಬರು ಭಯೋತ್ಪಾದಕರ ಹತ್ಯೆ
Update: 2024-05-16 17:08 GMT
ಶ್ರೀನಗರ : ಭಾರತೀಯ ಸೇನೆಯು ಗುರುವಾರ ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ನಿಯಂತ್ರಣ ರೇಖೆಯಲ್ಲಿ ನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದ್ದು, ಈ ಸಂದರ್ಭ ಇಬ್ಬರು ಭಯೋತ್ಪಾದಕರು ಹತ್ಯೆಯಾಗಿದ್ದಾರೆ. ತಂಗ್ಧಾರ್ ವಿಭಾಗದ ಗಡಿಬೇಲಿಯ ಇನ್ನೊಂದು ಬದಿಯಲ್ಲಿ ಭಯೋತ್ಪಾದಕರ ಶವಗಳು ಬಿದ್ದುಕೊಂಡಿದ್ದವು.
ಹೆಚ್ಚಿನ ಭಯೋತ್ಪಾದಕರನ್ನು ಪತ್ತೆ ಹಚ್ಚಲು ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ನಿರ್ದಿಷ್ಟ ಗುಪ್ತಚರ ಮಾಹಿತಿಯನ್ನು ಪಡೆದ ಬಳಿಕ ಭಾರತೀಯ ಸೇನೆ,ಜಮ್ಮು-ಕಾಶ್ಮೀರ ಪೋಲಿಸ್ ತಂಗ್ಧಾರ್ನ ಅಮ್ರೋಹಿ ಪ್ರದೇಶಲ್ಲಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದವು.
ಶೋಧ ಕಾರ್ಯಾಚರಣೆಯಲ್ಲಿ ಎರಡು ಪಿಸ್ತೂಲುಗಳು, ಗುಂಡುಗಳು ಮತ್ತು ಇತರ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಎಂದು ಚಿನಾರ್ ಕಾರ್ಪ್ಸ್ ತಿಳಿಸಿದೆ