ಮಧ್ಯಪ್ರದೇಶ | ರೈಲು ಬೋಗಿಯ ಅಡಿಯಲ್ಲಿ ಅಪಾಯಕಾರಿಯಾಗಿ 250 ಕಿ.ಮೀ ಪ್ರಯಾಣಿಸಿದ ವ್ಯಕ್ತಿ

Update: 2024-12-27 11:44 GMT

PC: X 

ಜಬಲ್‌ಪುರ : ರೈಲು ಬೋಗಿಯ ಅಡಿಯಲ್ಲಿ ವ್ಯಕ್ತಿಯೊಬ್ಬ ಅಪಾಯಕಾರಿಯಾಗಿ 250 ಕಿ.ಮೀ ಪ್ರಯಾಣಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ರೈಲು ಜಬಲ್‌ಪುರ ನಿಲ್ದಾಣ ತಲುಪಿದಾಗ ಈ ಘಟನೆ ರೈಲ್ವೆ ಸಿಬ್ಬಂದಿಗಳ ಗಮನಕ್ಕೆ ಬಂದಿದೆ. ಎಕ್ಸ್‌ಪ್ರೆಸ್ ರೈಲಿನ ಬೋಗಿಯ ಕೆಳಗೆ ಚಕ್ರಗಳ ನಡುವೆ ಇಟಾರ್ಸಿಯಿಂದ ಜಬಲ್‌ಪುರಕ್ಕೆ 250 ಕಿ.ಮೀ. ಇದೇ ರೀತಿಯಾಗಿ ಅಪಾಯಕಾರಿ ರೀತಿಯಲ್ಲಿ ಆ ವ್ಯಕ್ತಿ ಪ್ರಯಾಣಿಸಿದ್ದಾನೆ ಎಂದು ತಿಳಿದು ಬಂದಿದೆ. ಡಿಸೆಂಬರ್ 24 ರಂದು ದಾನಪುರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. .

ನಿತ್ಯದ ತಪಾಸಣೆಯ ವೇಳೆ ಎಸ್-4 ಕೋಚ್ ಅಡಿಯಲ್ಲಿ ಯುವಕನೊಬ್ಬ ಬಿದ್ದಿರುವುದನ್ನು ರೈಲ್ವೆ ನೌಕರರು ಗಮನಿಸಿದ್ದಾರೆ. ಆತನ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ತಕ್ಷಣವೇ ವೈರ್‌ಲೆಸ್ ಸಂವಹನದ ಮೂಲಕ ಲೊಕೊ ಪೈಲಟ್‌ಗೆ ಎಚ್ಚರಿಕೆ ನೀಡಿದ್ದಾರೆ. ಕೂಡಲೇ ರೈಲನ್ನು ನಿಲ್ಲಿಸಲಾಗಿದೆ.

ರೈಲ್ವೇ ಸಿಬ್ಬಂದಿ ಕೋಚ್‌ನ ಬಳಿಗೆ ಬಂದು ನೋಡಿದಾಗ ವ್ಯಕ್ತಿ ಕೆಳಗೆ ಅಡಗಿರುವುದು ಕಂಡುಬಂತು. ಹೊರಗೆ ಬರುವಂತೆ ಕೇಳಿಕೊಂಡರು. ನಂತರ ಯುವಕನನ್ನು ರೈಲ್ವೆ ಸಿಬ್ಬಂದಿ ವಿಚಾರಣೆಗೆ ಒಳಪಡಿಸಿದಾಗ, ತನ್ನ ಬಳಿ ಟಿಕೆಟ್‌ಗೆ ಹಣವಿಲ್ಲ. ತಾನು ತಲುಪಬೇಕಾದ ಸ್ಥಳವನ್ನು

ತಲುಪಲು ಅಪಾಯಕಾರಿ ರೀತಿಯಲ್ಲಿ ಪ್ರಯಾಣಿಸಿರುವುದಾಗಿ ಅತ ಹೇಳಿಕೊಂಡಿದ್ದಾನೆ.

ಈ ಕುರಿತು ಪ್ರತಿಕ್ರಿಯಿಸಿದ ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್)ಯು, ಆ ವ್ಯಕ್ತಿ ಸರಿಯಾದ ಮಾನಸಿಕ ಸ್ಥಿತಿಯಲ್ಲಿರಲಿಲ್ಲ ಎಂದು ಹೇಳಿದ್ದಾರೆ. ಯುವಕ ನಡವಳಿಕೆಯು ಕೆಲವು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದನ್ನು ಸೂಚಿಸುತ್ತದೆ ಎಂದು ಅವರು ವಿವರಿಸಿದ್ದಾರೆ.

ಅಪಾಯಕಾರಿಯಾಗಿ ಪ್ರಯಾಣಿಸಿದ ವ್ಯಕ್ತಿಯ ಗುರುತು ಇನ್ನೂ ತಿಳಿದಿಲ್ಲ. ರೈಲ್ವೇ ನೌಕರರು ಆತನನ್ನು ವಿಚಾರಣೆಯ ನಂತರ ಹೋಗಲು ಅನುಮತಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆದ ನಂತರ, ವ್ಯಕ್ತಿಯ ಗುರುತು ಮತ್ತು ವಾಸಸ್ಥಳ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಕುರಿತು ಆರ್‌ಪಿಎಫ್ ಈಗ ತನಿಖೆಯನ್ನು ಮಾಡುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News