ಆರೆಸ್ಸೆಸ್ ತನ್ನ ಸಂಪನ್ಮೂಲವನ್ನು ದೇಶದ ಹಿತಾಸಕ್ತಿಗೆ ಬಳಸಿದ್ದರೆ ಮೋದಿ ಬಾಲ್ಯದಲ್ಲಿ ಚಹಾ ಮಾರಾಟ ಮಾಡಬೇಕಾಗಿರಲಿಲ್ಲ: ಪ್ರಧಾನಿಯ ʼಪಂಕ್ಚರ್ʼ ಹೇಳಿಕೆಗೆ ಉವೈಸಿ ತಿರುಗೇಟು

ಪ್ರಧಾನಿ ನರೇಂದ್ರ ಮೋದಿ / ಸಂಸದ ಅಸದುದ್ದೀನ್ ಉವೈಸಿ (Photo: PTI)
ಹೊಸದಿಲ್ಲಿ: ವಕ್ಫ್ ಭೂಮಿಯನ್ನು ಸಮುದಾಯದ ಪ್ರಯೋಜನಕ್ಕೆ ಸರಿಯಾಗಿ ಬಳಸಿದ್ದರೆ ಮುಸ್ಲಿಂ ಯುವಕರು ಪಂಕ್ಚರ್ ಸರಿಪಡಿಸಬೇಕಾಗಿರಲಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿಯ ಹೇಳಿಕೆಗೆ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಪ್ರಧಾನಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ, ಸಂಘ (ಆರೆಸ್ಸೆಸ್) ತನ್ನ ಸಿದ್ಧಾಂತ ಮತ್ತು ಸಂಪನ್ಮೂಲಗಳನ್ನು ದೇಶದ ಹಿತಾಸಕ್ತಿಗಾಗಿ ಬಳಸಿದ್ದರೆ, ಪ್ರಧಾನಿ ತಮ್ಮ ಬಾಲ್ಯದಲ್ಲಿ ಚಹಾ ಮಾರಾಟ ಮಾಡುವ ಅಗತ್ಯವಿರಲಿಲ್ಲ ಎಂದು ಹೇಳಿದರು.
ಮೋದಿ ಸರಕಾರ ಕಳೆದ 11 ವರ್ಷಗಳಲ್ಲಿ ಬಡ ಹಿಂದೂಗಳು ಅಥವಾ ಮುಸ್ಲಿಮರಿಗೆ ಏನು ಮಾಡಿದ್ದಾರೆ? ವಕ್ಫ್ ಆಸ್ತಿಗಳಲ್ಲಿ ಏನಾಯಿತು ಎಂಬುದಕ್ಕೆ ದೊಡ್ಡ ಕಾರಣವೆಂದರೆ, ವಕ್ಫ್ ಕಾನೂನುಗಳು ದುರ್ಬಲವಾಗಿದೆ. ಮೋದಿಯ ವಕ್ಫ್ ತಿದ್ದುಪಡಿಗಳು ಅವುಗಳನ್ನು ಮತ್ತಷ್ಟು ದುರ್ಬಲಗೊಳಿಸುತ್ತವೆ ಎಂದು ಉವೈಸಿ ಹೇಳಿದರು.
ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಇಮ್ರಾನ್ ಪ್ರತಾಪ್‌ಗಢಿ ಈ ಕುರಿತು ಪ್ರತಿಕ್ರಿಯಿಸಿ, 'ಮುಸ್ಲಿಮರು ಪಂಕ್ಚರ್ ಸರಿಪಡಿಸುತ್ತಾರೆ' ಎಂಬ ಭಾಷಾ ಟ್ರೋಲ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಸಲಾಗುತ್ತದೆ. ಇಂತಹ ಹೇಳಿಕೆ ಪ್ರಧಾನಿಗೆ ಸಲ್ಲದು. ಮತ್ತೆ, ನೀವು ದೇಶದ ಯುವಕರನ್ನು ಈ ಹಂತಕ್ಕೆ ತಂದಿದ್ದೀರಿ. ಉದ್ಯೋಗಗಳಿಲ್ಲ, ಪಂಕ್ಚರ್ ಸರಿಪಡಿಸುವುದು, ಪಕೋಡ ಮಾರಾಟ ಮಾಡುವುದು ಒಂದೇ ಆಯ್ಕೆ. ಮುಸ್ಲಿಮರು ಪಂಕ್ಚರ್ ಮಾತ್ರ ಹಾಕುವುದಿಲ್ಲ. ಮುಸ್ಲಿಮರು ಏನು ಮಾಡಿದ್ದಾರೆಂದು ನಾನು ಹೇಳಬಲ್ಲೆ. ಆದರೆ, ಇದು ಸಮಯವಲ್ಲ. ನೀವು ಮುಸ್ಲಿಮರನ್ನು ಕಾಂಗ್ರೆಸ್ ಪರ ಎಂದು ಹೇಳುತ್ತಿದ್ದೀರಿ. ನೀವು ಅವರನ್ನು ದ್ವೇಷಿಸುತ್ತೀರಾ? ನೀವು ದ್ವೇಷಿಸದಿದ್ದರೆ, ಮುಖ್ತಾರ್ ಅಬ್ಬಾಸ್ ನಖ್ವಿ, ಶಹನವಾಜ್ ಹುಸೇನ್, ಎಂಜೆ ಅಕ್ಬರ್ ಮತ್ತು ಜಾಫರ್ ಇಸ್ಲಾಂ ಅವರನ್ನು ಏಕೆ ಕಸದ ಬುಟ್ಟಿಗೆ ಎಸೆದಿದ್ದೀರಿ? ವಕ್ಫ್ ಮಸೂದೆ ಮುಸ್ಲಿಮರಿಗೆ ಒಳ್ಳೆಯದನ್ನು ಮಾಡುತ್ತದೆ ಎಂದು ನೀವು ಹೇಳುತ್ತಿದ್ದೀರಿ, ಆದರೆ ಲೋಕಸಭೆಯಲ್ಲಿ ಅದನ್ನು ಮಂಡಿಸಲು ನಿಮ್ಮಲ್ಲಿ ಒಬ್ಬರೇ ಒಬ್ಬ ಮುಸ್ಲಿಂ ಸಂಸದರು ಇಲ್ಲ. ನೀವು ಮುಸ್ಲಿಂ ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡುತ್ತೀರಿ. ಲೋಕಸಭೆ ಅಥವಾ ರಾಜ್ಯಸಭೆ ಅಥವಾ ಯಾವುದೇ ರಾಜ್ಯ ವಿಧಾನಸಭೆಯಲ್ಲಿ ನಿಮಗೆ ಮುಸ್ಲಿಂ ಮಹಿಳಾ ಸದಸ್ಯರಿಲ್ಲ ಎಂದು ಹೇಳಿದರು.
मोदी ने कहा कि अगर वक़्फ़ की संपत्तियों का ठीक से इस्तेमाल होता तो मुसलमान नौजवानों को पंक्चर नहीं बनाना पड़ता। अगर संघ परिवार की सोच और संपत्ति देशहित में इस्तेमाल होती, तो मोदी को चाय नहीं बेचनी पड़ती। पिछले 11 साल में मोदी ने ग़रीब भारतीयों — हिंदू या मुसलमान — के लिए क्या…
— Asaduddin Owaisi (@asadowaisi) April 14, 2025