ಪ್ರಧಾನಿ ಮೋದಿಯವರ ಕೊಯಂಬತ್ತೂರು ರೋಡ್ ಶೋ ಗೆ ಮದ್ರಾಸ್ ಹೈಕೋರ್ಟ್ ಅನುಮತಿ
Update: 2024-03-15 12:43 GMT
ಕೊಯಂಬತ್ತೂರು : ಭದ್ರತಾ ಅಪಾಯ ಸೇರಿದಂತೆ ವಿವಿಧ ಕಾರಣಗಳನ್ನು ಉಲ್ಲೇಖಿಸಿ ರಾಜ್ಯ ಸರಕಾರ ಅನುಮತಿ ನಿರಾಕರಿಸಿದ ನಂತರ ಮಾರ್ಚ್ 18 ರಂದು ಕೊಯಂಭತ್ತೂರಿನಲ್ಲಿ ನಿಗದಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರ ರೋಡ್‌ಶೋಗೆ ಮದ್ರಾಸ್ ಹೈಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.
ಅನುಮತಿ ನಿರಾಕರಿಸಿದ್ದ ಪೊಲೀಸ್ ಆದೇಶವನ್ನು ಪ್ರಶ್ನಿಸಿ, ತಮಿಳುನಾಡು ಬಿಜೆಪಿ ಘಟಕವು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆಗೆ ಎತ್ತಿಕೊಂಡ ನ್ಯಾಯಾಲಯವು ಕೆಲವು ಷರತ್ತುಗಳೊಂದಿಗೆ ರೋಡ್‌ಶೋಗೆ ಅನುಮತಿ ನೀಡಿದೆ. 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಭಾರತದ ರಾಜ್ಯಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ದಕ್ಷಿಣದ ರಾಜ್ಯಗಳಲ್ಲಿ ಪ್ರಧಾನಿಯವರು ರೋಡ್ ಶೋ ಮಾಡುವ ಯೋಜನೆಯಲ್ಲಿದ್ದಾರೆ. ಮೊದಲ ರೋಡ್ ಶೋ ಹೈದರಾಬಾದ್ ನಲ್ಲಿ ನಡೆಯಲಿದೆ. ಬಳಿಕ ಕೊಯಂಬತ್ತೂರಿನಲ್ಲಿ 4 ಕಿ.ಮೀ. ರೋಡ್ ಮಾಡಲಿದ್ದಾರೆ.