ಅಣ್ಣಾಮಲೈ ವಿರುದ್ಧ ಮಾನಹಾನಿ ಪ್ರಕರಣದ ವಿಚಾರಣೆಗೆ ತಡೆ ಹೇರಿದ ಮದ್ರಾಸ್‌ ಹೈಕೋರ್ಟ್‌

Update: 2023-12-02 08:07 GMT

ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ (PTI)

ಚೆನ್ನೈ: ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರ ವಿರುದ್ಧ ದಾಖಲಿಸಲಾಗಿದ್ದ ಮಾನನಷ್ಟ ಪ್ರಕರಣದ ಎಲ್ಲಾ ವಿಚಾರಣೆಗಳಿಗೆ ಮದ್ರಾಸ್‌ ಹೈಕೋರ್ಟ್‌ ತಡೆಯಾಜ್ಞೆ ವಿಧಿಸಿದೆ.

ಮುಂದಿನ ಆದೇಶದ ತನಕ ವಿಚಾರಣೆಗೆ ತಡೆಯಾಜ್ಞೆ ವಿಧಿಸಿದ ಜಸ್ಟಿಸ್‌ ಜಿ ಜಯಚಂದ್ರನ್‌ ಅರ ಪೀಠ ದೂರುದಾರ ವಿ ಪಿಯೂಶ್‌ ಎಂಬವರಿಗೆ ನೋಟಿಸ್‌ ಜಾರಿಗೊಳಿಸಿದೆ ಹಾಗೂ ಅವರಿಗೆ ಈ ವಿಚಾರ ಯಾವ ರೀತಿ ಬಾಧಿತವಾಗಿದೆ ಎಂದು ತಿಳಿಸಲು ವಿಫಲರಾಗಿದ್ದಾರೆ ಎಂದು ಹೇಳಿದೆ.

ದೂರಿನಲ್ಲಿ ಯಾವುದೇ ಸೂಕ್ತ ವಿಚಾರವಿಲ್ಲದೇ ಇದ್ದರೂ ವಿಚಾರಣಾ ನ್ಯಾಯಾಲಯ ಅಣ್ಣಾಮಲೈ ಅವರಿಗೆ ಸಮನ್ಸ್‌ ಜಾರಿಗೊಳಿಸಿದೆ ಎಂಬದನ್ನೂ ಹೈಕೋರ್ಟ್‌ ಗಣನೆಗೆ ತೆಗೆದುಕೊಂಡಿದೆ. ಹೊರನೋಟಕ್ಕೆ ಈ ದೂರು ರದ್ದುಗೊಳಿಸಲು ಯೋಗ್ಯ ಎಂದೂ ನ್ಯಾಯಾಲಯ ಹೇಳಿದೆ.

ಸಾರ್ವಜನಿಕ ಭಾಷಣವೊಂದರಲ್ಲಿ ಅಣ್ಣಾಮಲೈ ಅವರು ಬೆದರಿಕೆಯೊಡ್ಡಿದ್ದರು ಹಾಗೂ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿದ್ದರೆಂದು ಸೇಲಂ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಸಾಮಾಜಿಕ ಕಾರ್ಯಕರ್ತರೆಂದು ತಮ್ಮನ್ನು ಗುರುತಿಸಿಕೊಳ್ಳುವ ಪಿಯೂಷ್‌ ಎಂಬವರು ನವೆಂಬರ್‌ 28ರಂದು ದೂರು ದಾಖಲಿಸಿದ್ದರು.

ಅಣ್ಣಾಮಲೈ ತಮ್ಮ ಒಂದು ಭಾಷಣದಲ್ಲಿ 1956 ಘಟನೆಯನ್ನು ಉಲ್ಲೇಖಿಸಿ ಆಗಿನ ಫಾರ್ವರ್ಡ್‌ ಬ್ಲಾಕ್‌ ಮುಖಂಡ ಯು ಮುತ್ತುಮಾರಲಿಂಗ ತೇವರ್‌ ಎಂಬವರು ಜಸ್ಟಿಸ್‌ ಪಾರ್ಟಿ ಮುಖಂಡರಿಗೆ ಎಚ್ಚರಿಕೆ ನೀಡಿ ನಾಸ್ತಿಕರು ಹಿಂದು ಧರ್ಮದ ಬಗ್ಗೆ ಮಾತನಾಡಿದರೆ ಅವರ ರಕ್ತವನ್ನು ದೇವರಿಗೆ ಅರ್ಪಿಸಲಾಗುವುದು ಎಂದು ಬೆದರಿಸಿದ್ದರೆಂದು ಹೇಳಿದ್ದರು.

ಪಿಯೂಶ್‌ ತಮ್ಮ ದೂರಿನಲ್ಲಿ ಅಣ್ಣಾಮಲೈ ಘಟನೆಯನ್ನು ತಿರುಚಿದ್ದಾರೆ ಹಾಗೂ ತೇವರ್‌ ಅಂತಹ ಹೇಳಿಕೆ ನೀಡಿಲ್ಲ ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News