ಮಣಿಪುರ | ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ, ಸ್ಫೋಟಕ ಪತ್ತೆ

Update: 2025-01-01 14:30 GMT

ಸಾಂದರ್ಭಿಕ ಚಿತ್ರ | PC : PTI

ಇಂಫಾಲ : ಮಣಿಪುರದ ಬಿಷ್ಣುಪರ ಹಾಗೂ ಥೌಬಾಲ್ ಜಿಲ್ಲೆಗಳಲ್ಲಿ ಶೋಧ ಕಾರ್ಯಾಚರಣೆ ಸಂದರ್ಭ ಭದ್ರತಾ ಪಡೆಗಳು ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಂಡಿವೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಬಿಷ್ಣುಪುರ ಜಿಲ್ಲೆಯ ಥೊಂಗ್ಖೊಂಗ್ಲೋಕ್ ಗ್ರಾಮದಿಂದ ಭದ್ರತಾ ಪಡೆಗಳು ಮಂಗಳವಾರ ಮ್ಯಾಗಝಿನ್ನೊಂದಿಗೆ 1 ಎಸ್ಎಲ್ಆರ್, ಒಂದು .303 ರೈಫಲ್, 1 ಬೋರ್ ಸಿಂಗಲ್ ಬ್ಯಾರಲ್ ಗನ್, ಎರಡು 9 ಎಂಎಂ ಪಿಸ್ತೂಲ್ ಹಾಗೂ ಮ್ಯಾಗಝಿನ್, 4 ಹ್ಯಾಂಡ್ ಗ್ರೆನೇಡ್, ಒಂದು ಡಿಟೋನೇಟರ್, ಸ್ಫೋಟಕ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿವೆ ಎಂದು ಹೇಳಿಕೆ ತಿಳಿಸಿದೆ.

ಭದ್ರತಾ ಪಡೆಗಳು ಥೌಬಾಲ್ ಜಿಲ್ಲೆಯ ಲೈಶಂಗ್ಥೆಮ್ ಇಕೋಪ್ಪಾಟ್ ಪ್ರದೇಶದಿಂದ ಒಂದು ಎಎಂಆರ್ ಹಾಗೂ ಮ್ಯಾಗಝಿನ್, ಎರಡು ಸಿಂಗಲ್ ಬೋಲ್ಟ್ ಆ್ಯಕ್ಷನ್ ರೈಫಲ್, ಮೂರು 9 ಎಂಎಂ ಪಿಸ್ತೂಲ್, (ದೇಶಿ ನಿರ್ಮಿತ), 1 ಹ್ಯಾಂಡ್ ಗ್ರೆನೇಡ್, 4 ಎಂ.ಕೆ.-13ಟಿ ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ನಡುವೆ ಇಂಫಾಲ ಪೂರ್ವ ಜಿಲ್ಲೆಯ ಬೆಂಗಾಳಿ ಕ್ರಾಸಿಂಗ್ ಸಮೀಪ ಮಂತ್ರಿಪುಖ್ರಿ ಬಝಾರ್ನಲ್ಲಿ ಸುಲಿಗೆಯಲ್ಲಿ ಭಾಗಿಯಾದ ಆರೋಪದಲ್ಲಿ ನಿಷೇಧಿತ ಸಂಘಟನೆ ಕಂಗ್ಲೈಪಕ್ ಕಮ್ಯೂನಿಸ್ಟ್ ಪಾರ್ಟಿ (ಪೀಪಲ್ಸ್ ವಾರ್ ಗ್ರೂಪ್) ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಂದ ಒಂದು 9 ಎಂಎಂ ಪಿಸ್ತೂಲ್ ಹಾಗೂ ಮ್ಯಾಗಝಿನ್, ಎರಡು ಕೆಸಿಪಿಯ ಹಣದ ರಶೀದಿ (ಪಿಡಬ್ಲ್ಯುಜಿ) ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News