ಸಂವಿಧಾನ ಬದಲಾಯಿಸುವ ಕುರಿತು ಮಾತನಾಡುವ ಬಿಜೆಪಿ ನಾಯಕರನ್ನು ನಿಯಂತ್ರಿಸುವಲ್ಲಿ ಮೋದಿ ವಿಫಲ : ಲಾಲು ಪ್ರಸಾದ್

Update: 2024-04-15 15:00 GMT

ಲಾಲು ಪ್ರಸಾದ್ | PC : PTI  

ಪಾಟ್ನಾ: ಲೋಕಸಭಾ ಚುನಾವಣೆಯಲ್ಲಿ ಪಕ್ಷ ಮೂರನೇ ಎರಡು ಬಹುಮತ ಗಳಿಸಿದರೆ ‘ಹೊಸ ಸಂವಿಧಾನ’ ತರಲಾಗುವುದು ಎಂದು ಮಾತನಾಡಿದ ಬಿಜೆಪಿ ನಾಯಕರನ್ನು ನಿಯಂತ್ರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದಾರೆ ಎಂದು ಆರ್ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನ ಬಡವರು ಹಾಗೂ ದುರ್ಬಲ ವರ್ಗಗಳಿಗೆ ಆಶಾಕಿರಣವಾಗಿದೆ. ಸಂವಿಧಾನದ ಮೇಲೆ ಕೆಟ್ಟ ದೃಷ್ಟಿ ಬೀರುವವರ ಕಣ್ಣುಗಳನ್ನು ಕೀಳಲಾಗುವುದು ಎಂದು ಅವರು ಹೇಳಿದರು.

‘‘ಪ್ರಧಾನಿ ನಿಜವಾಗಿಯೂ ಭಯಭೀತರಾಗಿದ್ದಾರೆ. ಅವರ ವಿಫಲತೆ ರಾಷ್ಟ್ರದ ಮುಂದೆ ಬಹಿರಂಗವಾಗಿರುವುದರಿಂದ ಸೋಲಿನ ಭಯದಲ್ಲಿ ಇದ್ದಾರೆ. ತನ್ನ ಭಯವನ್ನು ಮುಚ್ಚಿಕೊಳ್ಳಲು ಬಿಜೆಪಿಗೆ 370 ಪ್ಲಸ್ ಸ್ಥಾನಗಳು ಬರುತ್ತವೆ ಎಂದು ಹೇಳುತ್ತಿದ್ದಾರೆ’’ ಎಂದು ಅವರು ತಿಳಿಸಿದರು.

ಸಂವಿಧಾನವನ್ನು ಬದಲಾಯಿಸುವುದಾಗಿ ಹಲವು ಬಿಜೆಪಿ ನಾಯಕರು ಮಾತನಾಡುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಲಾಲು ಪ್ರಸಾದ್, ಅವರ ವಿರುದ್ಧ ಯಾರೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅವರಲ್ಲಿ ಕೆಲವರನ್ನು ಪಕ್ಷ ಚುನಾವಣಾ ಕಣಕ್ಕೆ ಅಭ್ಯರ್ಥಿಯನ್ನಾಗಿ ಇಳಿಸಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News