ಪೊಲೀಸರು ಇರುವ ಸಿಗ್ನಲ್‍ಗಳಲ್ಲೇ ಅಧಿಕ ಅಪಘಾತ, ಸಾವು: ವರದಿ
ಹೊಸದಿಲ್ಲಿ: ಸಿಗ್ನಲ್ ದೀಪಗಳಿಗಿಂತ ಉತ್ತಮವಾಗಿ ಸಂಚಾರಿ ಪೊಲೀಸರು ವಾಹನದಟ್ಟಣೆ ಮಾಡಬಲ್ಲರು ಎಂಬ ಸಾಮಾನ್ಯ ತಿಳಿವಳಿಕೆಗೆ ವಿರುದ್ಧವಾಗಿ, ಪೊಲೀಸ್ ಸಿಬ್ಬಂದಿ ಇರುವ ಟ್ರಾಫಿಕ್ ಸಿಗ್ನಲ್ಗಳಲ್ಲೇ ಅಧಿಕ ಅಪಘಾತ ಮತ್ತು ಸಾವುಗಳು ಸಂಭವಿಸಿರುವ ಅಂಶವನ್ನು ಸರ್ಕಾರಿ ಅಂಕಿ ಅಂಶಗಳು ಬಹಿರಂಗಪಡಿಸಿವೆ.
ಇದಕ್ಕಿಂತ ಆತಂಕಕಾರಿ ಬೆಳವಣಿಗೆಯೆಂದರೆ ಕಳೆದ ವರ್ಷದ ಅಂಕಿ ಅಂಶಗಳಿಗೆ ಹೋಲಿಸಿದರೆ, ಪೊಲೀಸರು ನಿರ್ವಹಿಸುವ ಜಂಕ್ಷನ್ಗಳಲ್ಲಿ ಸಾವಿನ ಪ್ರಮಾಣ ಶೇಕಡ 17ರಷ್ಟು ಹೆಚ್ಚಿದೆ. 2022ರಲ್ಲಿ ಇಂಥ ಕಡೆಗಳಲ್ಲಿ ಶೇಕಡ 21ರಷ್ಟು ಅಪಘಾತಗಳು ಅಧಿಕವಾಗಿವೆ.
ಪೊಲೀಸರು ನಿರ್ವಹಿಸುವ ರಸ್ತೆ ಕ್ರಾಸಿಂಗ್ಗಳಲ್ಲಿ 2022ರಲ್ಲಿ ಒಟ್ಟು 2421 ಮಂದಿ ರಸ್ತೆ ಅಪಘಾತದಿಂದ ಜೀವ ಕಳೆದುಕೊಂಡಿದ್ದರೆ, ಟ್ರಾಫಿಕ್ ಸಿಗ್ನಲ್ ಲೈಟ್ಗಳು ಇರುವ ಕಡೆಗಳಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 2238.
ಮಂಗಳವಾರ ಬಿಡುಗಡೆ ಮಾಡಲಾದ 'ಭಾರತದಲ್ಲಿ ರಸ್ತೆ ಅಪಘಾತಗಳು' ಎಂಬ ವರದಿಯಲ್ಲಿ ಈ ಅಂಕಿ ಅಂಶ ಉಲ್ಲೇಖಿಸಲಾಗಿದೆ. ಟ್ರಾಫಿಕ್ ಸಿಗ್ನಲ್ ದೀಪಗಳು ಅಳವಡಿಸಿರುವ ಕಡೆಗಳನ್ನು ಹೊರತುಪಡಿಸಿದರೆ, ಇತರ ಕಡೆಗಳಲ್ಲಿ ಅಪಘಾತಗಳು ಹೆಚ್ಚಿವೆ. ಟ್ರಾಫಿಕ್ ಸಿಗ್ನಲ್ ದೀಪಗಳು ಇರುವ ಜಂಕ್ಷನ್ಗಳಲ್ಲಿ ಅಪಘಾತಗಳು, ಸಾವು ಮತ್ತು ಗಾಯಗಳು ಕಡಿಮೆಯಾಗಿವೆ. ಫ್ಲ್ಯಾಶ್ ಆಗುವ ಸಿಗ್ನಲ್ಗಳು ಹೆಚ್ಚು ಮಿತವ್ಯಯಕಾರಿ ಹಸ್ತಕ್ಷೇಪ ಎನಿಸಿದ್ದು, ಇಂಥ ಕಡೆಗಳಲ್ಲಿ ರಸ್ತೆ ದಾಟುವಾಗ ಚಾಲಕರು ಹೆಚ್ಚಿನ ಜಾಗೃತೆ ವಹಿಸುತ್ತಾರೆ ಎನ್ನುವ ಅಂಶವೂ ತಿಳಿದು ಬಂದಿದೆ.
ಈ ವರದಿಯ ಪ್ರಕಾರ 2022ರಲ್ಲಿ ಪೊಲೀಸರು ನಿಯಂತ್ರಿಸುವ ಜಂಕ್ಷನ್ಗಳಲ್ಲಿ ನಡೆದ ಅಪಘಾತಗಳಲ್ಲಿ ಗಾಯಗೊಂಡವರ ಸಂಖ್ಯೆ 7733. ಪೊಲೀಸರು ಕಾರ್ಯನಿರ್ವಹಿಸುವ ಕಡೆಗಳಲ್ಲಿ ತಾತ್ಕಾಲಿಕವಾಗಿ ಅವರು ಇಲ್ಲದ ಸಂದರ್ಭದಲ್ಲಿ ಹಾಗೂ ಪೊಲೀಸರು ಗಮನ ಹರಿಸದೇ ಇರುವ ಸಂದರ್ಭದಲ್ಲಿ ಸಂಚಾರ ನಿಯಮಗಳ ಉಲ್ಲಂಘನೆಯೂ ಅಧಿಕ ಎಂದು ವಿವರಿಸಲಾಗಿದೆ.