ಹೈಜಾಕ್ ಯತ್ನದಿಂದ 15 ಭಾರತೀಯರು ಸೇರಿದಂತೆ 21 ಸಿಬ್ಬಂದಿಯಿದ್ದ ವಾಣಿಜ್ಯ ಹಡಗನ್ನು ರಕ್ಷಿಸಿದ ಭಾರತೀಯ ನೌಕಾಪಡೆ
Update: 2024-01-06 09:52 GMT
ಹೊಸದಿಲ್ಲಿ: ಅರಬ್ಬೀ ಸಮುದ್ರದಲ್ಲಿ ಸೊಮಾಲಿಯಾ ಕಡಲ್ಗಳ್ಳರು ಹೈಜಾಕ್ ಮಾಡಿದ್ದ ವ್ಯಾಪಾರ ಹಡಗಿನಲ್ಲಿದ್ದ 15 ಭಾರತೀಯರ ಸಹಿತ 21 ಸಿಬ್ಬಂದಿಗಳನ್ನು ಭಾರತೀಯ ನೌಕಾಪಡೆ ಶುಕ್ರವಾರ ರಕ್ಷಿಸಿದೆ.
ಹಡಗಿನ ಸಿಬ್ಬಂದಿಗಳೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಭಾರತೀಯ ನೌಕಾಪಡೆ ಹೇಳಿದೆ. ನೌಕಾಪಡೆಯ ಕಮಾಂಡೋ ಮಾರ್ಕೋಸ್ ಹಡಗಿನಲ್ಲಿ ಜಾಲಾಡಿ ಅದರಲ್ಲಿ ಹೈಜಾಕ್ ಮಾಡಿದವರು ಯಾರೂ ಇಲ್ಲ ಎಂದು ದೃಢಪಡಿಸಿದೆ.
ಭದ್ರತಾ ಪಡೆಗಳ ಕಟು ಎಚ್ಚರಿಕೆಯ ನಂತರ ಕಡಲ್ ಗಳ್ಳರು ಹಡಗನ್ನು ತೊರೆದರೆಂದು ನೌಕಾಪಡೆ ಹೇಳಿದೆ.
ಲೈಬೀರಿಯಾ ಧ್ವಜ ಹೊಂದಿದ್ದ ವಾಣಿಜ್ಯ ಹಡಗು ಎಂವಿ ಲೀಲಾ ನೊರ್‌ಫೊಕ್ ಗುರುವಾರ ಸಂಜೆ ಯುಕೆ ಮೆರೈನ್ ಟ್ರೇಢ್ ಆಪರೇಷನ್ಸ್ ಪೋರ್ಟಲ್ ಅವರಿಗೆ ಸಂದೇಶ ಕಳುಹಿಸಿ ಐದರಿಂದ ಆರು ಮಂದಿ ಶಸ್ತ್ರಸಜ್ಜಿತ ಗುಂಪು ಹಡಗನ್ನು ಪ್ರವೇಶಿಸಿದೆ ಎಂದು ಹೇಳಿತ್ತು.
ಭಾರತೀಯ ನೌಕಾಪಡೆ ತನ್ನ ಕಡಲ್ಗಳ್ಳತನ ತಡೆ ಪ್ಯಾಟ್ರೋಲ್ ನೌಕೆ ಐಎನ್‌ಎಸ್ ಚೆನೈ ಅನ್ನು ಕಳಿಸಿ ಯಶಸ್ವಿ ಕಾರ್ಯಾಚರಣೆ ನಡೆಸಿದೆ.