ದಿಲ್ಲಿಯಲ್ಲಿ ರಾಹುಲ್ ಗಾಂಧಿ ಕ್ಯಾಬ್ ಪ್ರಯಾಣ

Update: 2024-08-19 16:34 GMT

ಹೊಸದಿಲ್ಲಿ : ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೋಮವಾರ ದಿಲ್ಲಿಯಲ್ಲಿ ಉಬರ್ ಕ್ಯಾಬ್‌ನಲ್ಲಿ ಪ್ರಯಾಣಿಸಿ ಕಾಬ್ ಡ್ರೈವರ್ ಗಳ ಸಂಕಷ್ಟಗಳನ್ನು ಅರಿತುಕೊಳ್ಳಲು ಪ್ರಯತ್ನಿಸಿದ್ದಾರೆ.

ರಾಹುಲ್ ತನ್ನ ಫೋನ್‌ ನಿಂದಲೇ 10 ಜನಪಥ್ ಮಾರ್ಗಕ್ಕೆ ಟ್ಯಾಕ್ಸಿ ಬುಕ್ ಮಾಡಿದ್ದು ಇದಕ್ಕಾಗಿ ಅವರು ಸುಮಾರು 438 ರೂ. ಬಾಡಿಗೆ ನೀಡಿದ್ದಾರೆ. ಟ್ಯಾಕ್ಸಿಯಲ್ಲಿ, ರಾಹುಲ್ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತು ಪ್ರಯಾಣದ ಸಮಯದಲ್ಲಿ ಆತನೊಂದಿಗೆ ಮಾತನಾಡಿದರು. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕಾಬ್ ಡ್ರೈವರ್ ಗಳ ಸಮಸ್ಯೆಗಳನ್ನು ಪರಿಹರಿಸಲು ಕಾಂಗ್ರೆಸ್ ಅಗತ್ಯ ನೀತಿಗಳನ್ನು ರೂಪಿಸಲಿದೆ ಎಂದು ರಾಹುಲ್ ಹೇಳಿದ್ದಾರೆ.

ಹೆಚ್ಚಾದ ಖರ್ಚು ಮತ್ತು ಕಡಿಮೆಯಾದ ಆದಾಯದಿಂದಾಗಿ ಕಾಬ್ ಡ್ರೈವರ್ ಗಳು ಸಂಕಷ್ಟದಲ್ಲಿದ್ದಾರೆ ಎಂದು ರಾಹುಲ್ ಗಾಂಧಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದರಲ್ಲಿ ಬರೆದಿದ್ದಾರೆ.

ಈ ಪ್ರಯಾಣದ ಸುಮಾರು 12 ನಿಮಿಷಗಳ ವಿಡಿಯೋವನ್ನು ರಾಹುಲ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News