ದಿಲ್ಲಿಯ ಜನರೇ ಎದ್ದೇಳಿ, ದಿಲ್ಲಿ ಗಟಾರವಾಗಿದೆ, ಉಚಿತ ಕೊಡುಗೆಗಳಿಗೆ ತೆತ್ತ ಬೆಲೆ ಇದು: ಗೌತಮ್ ಗಂಭೀರ್
Update: 2023-07-13 13:03 GMT
ಹೊಸದಿಲ್ಲಿ: ಯಮುನಾ ನದಿ ದಾಖಲೆ ಪ್ರಮಾಣದಲ್ಲಿ ಹರಿಯುತ್ತಿದ್ದು, ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪ್ರವಾಹದ ಪರಿಸ್ಥಿತಿ ಉದ್ಭವಿಸಿದೆ.
ಈ ಹಿನ್ನೆಲೆಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ದಿಲ್ಲಿ ಸರ್ಕಾರಕ್ಕೆ ಚಾಟಿ ಬೀಸಿದ ಬಿಜೆಪಿ ಸಂಸದ, ಕ್ರಿಕೆಟಿಗ ಗೌತಮ್ ಗಂಭೀರ್, ʼದಿಲ್ಲಿ ಚರಂಡಿಯಂತಾಗಿದೆʼ ಎಂದು ಆಕ್ರೋಶ ಹೊರಹಾಕಿದ್ದಾರೆ.
ದಿಲ್ಲಿ ಸರ್ಕಾರದ ಉಚಿತ ಕೊಡುಗೆಗಳನ್ನು ಗುರಿಯಾಗಿಸಿದ ಗಂಭೀರ್, ʼದಿಲ್ಲಿಯ ಜನರೇ ಎದ್ದೇಳಿ, ದೆಹಲಿ ಗಟಾರವಾಗಿದೆ. ಯಾವುದೂ ಉಚಿತವಲ್ಲ, ಇದು ತೆತ್ತ ಬೆಲೆʼ ಎಂದು ಅವರು ಟ್ವೀಟ್ ಮಾಡಿದ್ದಾರೆ.
ದಿಲ್ಲಿಯ ರಸ್ತೆಗಳಿಗೆ ಯಮುನಾ ನದಿಯ ನೀರು ನುಗ್ಗಿದ್ದು, ಬಹುತೇಕ ನೆರೆ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಸರ್ಕಾರ ಸೂಚಿಸಿದ್ದು, ಶಾಲಾ-ಕಾಲೇಜು ಮಕ್ಕಳಿಗೆ ರಜೆಯನ್ನು ಘೋಷಿಸಿದೆ.