ಮುಂಬೈ ಬಳಿ ಮಳಿಗೆಯೊಂದರ ಸಿಬ್ಬಂದಿಗೆ ಗನ್ ಗುರಿಯಿಟ್ಟ ದುಷ್ಕರ್ಮಿ

Update: 2023-10-13 18:39 GMT

Photo : NDTV

ಮುಂಬೈ: ದರೋಡೆ ನಡೆಸಲು ಗನ್ ನೊಂದಿಗೆ ಬೇಕರಿ ಮಳಿಗೆಯನ್ನು ಪ್ರವೇಶಿಸಿರುವ ವ್ಯಕ್ತಿಯೊಬ್ಬ, ತನ್ನ ಕೆಲಸ ಸುಲಭವಾಗಿ ನಡೆಯಬಹುದು ಎಂದುಕೊಂಡಿದ್ದ ಯೋಜನೆಯು ವಿಫಲವಾಗಿರುವ ಘಟನೆ ನಡೆದಿದೆ ಎಂದು ndtv.com ವರದಿ ಮಾಡಿದೆ.

ಈ ಘಟನೆಯ ಮುಂಬೈ ಬಳಿಯ ಕಶಿಮೀರಾದ ಅಂತಾರಾಷ್ಟ್ರೀಯ ಬೇಕರಿ ಮಳಿಗೆಯೊಂದರಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದ್ದು, ಮಳಿಗೆಯನ್ನು ಪ್ರವೇಶಿಸಿರುವ ದುಷ್ಕರ್ಮಿಯೊಬ್ಬ ದುಡ್ಡಿಗಾಗಿ ಮಳಿಗೆಯ ಮಾಲಕನ ತಲೆಗೆ ಗನ್ ಗುರಿ ಇಟ್ಟಿದ್ದಾನೆ. ಆದರೆ, ನಂತರ ನಡೆದಿರುವುದು ವಿಚಿತ್ರವಾಗಿದ್ದು, ಈ ಘಟನೆಯು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ದುಷ್ಕರ್ಮಿಯು ಎರಡು ಬಾರಿ ಗುಂಡು ಹಾರಿಸಲು ಪ್ರಯತ್ನಿಸಿದ್ದಾನಾದರೂ, ಗುಂಡು ಸಿಡಿದಿಲ್ಲ. ಆತ ಗನ್ ಅನ್ನು ಮತ್ತೆ ಲೋಡ್ ಮಾಡಲು ಪ್ರಯತ್ನಿಸಿದ್ದಾನಾದರೂ ಅದೂ ಕೂಡಾ ವಿಫಲವಾಗಿದೆ. ಇದರಿಂದ ಆತ ಮಳಿಗೆಯಿಂದ ಪರಾರಿಯಾಗಿದ್ದಾನೆ. ಈ ಇಡೀ ಘಟನೆಯು ಆತ ಬೇಕರಿ ಪ್ರವೇಶಿಸಿ, ಅಲ್ಲಿಂದ ನಿರ್ಗಮಿಸುವ ವೇಳೆಗೆ ಕೇವಲ ಏಳು ಸೆಕೆಂಡುಗಳಲ್ಲಿ ಮುಕ್ತಾಯವಾಗಿದೆ.

ದುಷ್ಕರ್ಮಿಯನ್ನು ಕಂಡು ಮಳಿಗೆಯ ಸಿಬ್ಬಂದಿಗಳು ಭಯಭೀತರಾಗುವ ಬದಲು ಗೊಂದಲಗೊಂಡಿರುವುದು ಹಾಗೂ ವಿಫಲ ದರೋಡೆ ಯತ್ನದ ಆ ಆರು ಸೆಕೆಂಡುಗಳ ಅವಧಿಯಲ್ಲಿ ನಿಖರವಾಗಿ ಏನಾಯಿತು ಎಂಬುದನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿರುವುದು ವಿಡಿಯೊ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News