ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣ ; ಆರೋಪಿಗಳ ಪೊಲೀಸ್ ಕಸ್ಟಡಿ 15 ದಿನ ವಿಸ್ತರಿಸಿದ ನ್ಯಾಯಾಲಯ
Update: 2023-12-21 17:08 GMT
ಹೊಸದಿಲ್ಲಿ: ಸಂಸತ್ ಭವನದ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ಬಂಧಿತರಾಗಿರುವ ನಾಲ್ವರು ಆರೋಪಿಗಳ ಕಸ್ಟಡಿ ಅವಧಿಯನ್ನು ದಿಲ್ಲಿ ನ್ಯಾಯಾಲಯ ಬುಧವಾರ 15 ದಿನಗಳ ಕಾಲ ವಿಸ್ತರಿಸಿದೆ.
ಎಲ್ಲಾ ನಾಲ್ವರು ಆರೋಪಿಗಳಾದ ಮನೋರಂಜನ್ ಡಿ, ಸಾಗರ್ ಶರ್ಮಾ, ನೀಲಂ ಅಝಾದ್ ಹಾಗೂ ಅಮೋಲ್ ಶಿಂಧೆ ಅವರನ್ನು ಗುರುವಾರ ಬೆಳಗ್ಗೆ ದಿಲ್ಲಿಯ ಪಾಟಿಯಾಲ ಹೌಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
ಸಂಸತ್ ಭದ್ರತಾ ಉಲ್ಲಂಘನೆ ಆರೋಪದಲ್ಲಿ ಬಂಧಿತರಾಗಿರುವ ಈ ನಾಲ್ವರ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.