ಹೆಲ್ಮೆಟ್ ಧರಿಸಿಲ್ಲ ಎಂದು ಬೈಕ್ ಗೆ ಪೆಟ್ರೋಲ್ ಹಾಕದ ಪಂಪ್ ನ ವಿದ್ಯುತ್ ಕಡಿತಗೊಳಿಸಿದ ಲೈನ್ ಮ್ಯಾನ್!

Update: 2025-01-15 14:12 GMT

ಸಾಂದರ್ಭಿಕ ಚಿತ್ರ | PC : freepik.com  

ಲಕ್ನೋ: ಉತ್ತರಪ್ರದೇಶದ ಹಾಪುರ್ ನಲ್ಲಿ ಹೆಲ್ಮೆಟ್ ಧರಿಸಿಲ್ಲ ಎಂದು ಪೆಟ್ರೋಲ್ ಹಾಕಲು ನಿರಾಕರಿಸಿದ ಪೆಟ್ರೋಲ್ ಪಂಪ್ ನ ವಿದ್ಯುತ್ ಸಂಪರ್ಕವನ್ನು ಲೈನ್ ಮ್ಯಾನ್ ಓರ್ವ ಕಡಿತಗೊಳಿಸಿರುವ ಘಟನೆ ನಡೆದಿದೆ.

ಬೈಕರ್ ಸವಾರರ ಸುರಕ್ಷತೆ ದೃಷ್ಟಿಯಿಂದ ಹಾಪುರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರೇರಣಾ ಶರ್ಮಾ ಅವರು ʼಹೆಲ್ಮೆಟ್‌ ಧರಿಸದಿದ್ದರೆ ಪೆಟ್ರೋಲ್‌ ಇಲ್ಲʼ(ನೋ ಹೆಲ್ಮೆಟ್, ನೋ ಪೆಟ್ರೋಲ್) ನಿಯಮ ಜಾರಿಗೆ ಸೂಚಿಸಿದ್ದರು. ಉತ್ತರಪ್ರದೇಶದ ಹಾಪುರ್ ನ ಪೆಟ್ರೋಲ್ ಪಂಪ್ ಈ ನಿಯಮವನ್ನು ಜಾರಿಗೊಳಿಸಿತ್ತು. ಸೋಮವಾರ ಬೈಕ್ ರೈಡರ್ ಓರ್ವ ಹೆಲ್ಮೆಟ್ ಇಲ್ಲದೆ ಇಂಧನ ತುಂಬಿಸಲು ಪೆಟ್ರೋಲ್ ಪಂಪ್ ಗೆ ತೆರಳಿದ್ದಾನೆ. ಈ ವೇಳೆ ಬಂಕ್ ಸಿಬ್ಬಂದಿಗಳು ಆತನ ಬೈಕ್ ಗೆ ಪೆಟ್ರೋಲ್ ಹಾಕಲು ನಿರಾಕರಿಸಿದ್ದಾರೆ. ಹೆಲ್ಮೆಟ್ ಧರಿಸಿದ್ರೆ ಮಾತ್ರ ಪೆಟ್ರೋಲ್ ಕೊಡುವುದು ಎಂದು ಹೇಳಿದ್ದಾರೆ.

ಬೈಕ್ ನಲ್ಲಿ ತೆರಳಿದ್ದ ವ್ಯಕ್ತಿ ಲೈನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಪೆಟ್ರೋಲ್ ಕೊಟ್ಟಿಲ್ಲ ಎಂದು ಕೋಪಗೊಂಡು ಸೇಡು ತೀರಿಸಿಕೊಳ್ಳಲು ಮುಂದಾದ ಆತ ವಿದ್ಯುತ್ ಕಂಬವನ್ನು ಹತ್ತಿ ಪೆಟ್ರೋಲ್ ಪಂಪ್ ಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾನೆ. ಇದರಿಂದಾಗಿ ಪೆಟ್ರೋಲ್ ಬಂಕ್ ನಲ್ಲಿ ಸಿಬ್ಬಂದಿಗಳು ವಿದ್ಯುತ್ ಇಲ್ಲದೆ ಪರದಾಡಿದ್ದಾರೆ. ಈ ಬಗ್ಗೆ ದೂರು ನೀಡಿದ ಬಳಿಕ ಸುಮಾರು 20 ನಿಮಿಷ ಕಳೆದ ನಂತರ ಪೆಟ್ರೋಲ್ ಬಂಕ್ ಗೆ ವಿದ್ಯುತ್ ಸಂಪರ್ಕ ಮತ್ತೆ ಕಲ್ಪಿಸಲಾಗಿದೆ.

ಈ ಕುರಿತು ಪೆಟ್ರೋಲ್ ಪಂಪ್ ಮಾಲಕರು ಪೊಲೀಸ್ ದೂರು ದಾಖಲಿಸಿದ್ದಾರೆ. ಲೈನ್ ಮ್ಯಾನ್ ವಿದ್ಯುತ್ ಕಡಿತಗೊಳಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ʼಲೈನ್ ಮ್ಯಾನ್ ಹೆಲ್ಮೆಟ್ ಧರಿಸದೆ ಬಂದಾಗ, ನಾವು ಅವರ ಬೈಕ್ ಗೆ ಇಂಧನ ತುಂಬಲು ನಿರಾಕರಿಸಿದ್ದೇವೆ. ಈ ವೇಳೆ ಅವರು ಕೋಪದಿಂದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ ಎಂದು ಪೆಟ್ರೋಲ್ ಪಂಪ್ ನ ಸಿಬ್ಬಂದಿಯೋರ್ವರು ತಿಳಿಸಿದ್ದಾರೆ.ಹೆಲ್ಮೆಟ್ ಧರಿಸಿಲ್ಲ ಎಂದು ಬೈಕ್ ಗೆ ಪೆಟ್ರೋಲ್ ಹಾಕದ ಪಂಪ್ ನ ವಿದ್ಯುತ್ ಕಡಿತಗೊಳಿಸಿದ ಲೈನ್ ಮ್ಯಾನ್!

ಲಕ್ನೋ: ಉತ್ತರಪ್ರದೇಶದ ಹಾಪುರ್ ನಲ್ಲಿ ಹೆಲ್ಮೆಟ್ ಧರಿಸಿಲ್ಲ ಎಂದು ಪೆಟ್ರೋಲ್ ಹಾಕಲು ನಿರಾಕರಿಸಿದ ಪೆಟ್ರೋಲ್ ಪಂಪ್ ನ ವಿದ್ಯುತ್ ಸಂಪರ್ಕವನ್ನು ಲೈನ್ ಮ್ಯಾನ್ ಓರ್ವ ಕಡಿತಗೊಳಿಸಿರುವ ಘಟನೆ ನಡೆದಿದೆ.

ಬೈಕರ್ ಸವಾರರ ಸುರಕ್ಷತೆ ದೃಷ್ಟಿಯಿಂದ ಹಾಪುರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರೇರಣಾ ಶರ್ಮಾ ಅವರು ʼಹೆಲ್ಮೆಟ್‌ ಧರಿಸದಿದ್ದರೆ ಪೆಟ್ರೋಲ್‌ ಇಲ್ಲʼ(ನೋ ಹೆಲ್ಮೆಟ್, ನೋ ಪೆಟ್ರೋಲ್) ನಿಯಮ ಜಾರಿಗೆ ಸೂಚಿಸಿದ್ದರು. ಉತ್ತರಪ್ರದೇಶದ ಹಾಪುರ್ ನ ಪೆಟ್ರೋಲ್ ಪಂಪ್ ಈ ನಿಯಮವನ್ನು ಜಾರಿಗೊಳಿಸಿತ್ತು. ಸೋಮವಾರ ಬೈಕ್ ರೈಡರ್ ಓರ್ವ ಹೆಲ್ಮೆಟ್ ಇಲ್ಲದೆ ಇಂಧನ ತುಂಬಿಸಲು ಪೆಟ್ರೋಲ್ ಪಂಪ್ ಗೆ ತೆರಳಿದ್ದಾನೆ. ಈ ವೇಳೆ ಬಂಕ್ ಸಿಬ್ಬಂದಿಗಳು ಆತನ ಬೈಕ್ ಗೆ ಪೆಟ್ರೋಲ್ ಹಾಕಲು ನಿರಾಕರಿಸಿದ್ದಾರೆ. ಹೆಲ್ಮೆಟ್ ಧರಿಸಿದ್ರೆ ಮಾತ್ರ ಪೆಟ್ರೋಲ್ ಕೊಡುವುದು ಎಂದು ಹೇಳಿದ್ದಾರೆ.

ಬೈಕ್ ನಲ್ಲಿ ತೆರಳಿದ್ದ ವ್ಯಕ್ತಿ ಲೈನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಪೆಟ್ರೋಲ್ ಕೊಟ್ಟಿಲ್ಲ ಎಂದು ಕೋಪಗೊಂಡು ಸೇಡು ತೀರಿಸಿಕೊಳ್ಳಲು ಮುಂದಾದ ಆತ ವಿದ್ಯುತ್ ಕಂಬವನ್ನು ಹತ್ತಿ ಪೆಟ್ರೋಲ್ ಪಂಪ್ ಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾನೆ. ಇದರಿಂದಾಗಿ ಪೆಟ್ರೋಲ್ ಬಂಕ್ ನಲ್ಲಿ ಸಿಬ್ಬಂದಿಗಳು ವಿದ್ಯುತ್ ಇಲ್ಲದೆ ಪರದಾಡಿದ್ದಾರೆ. ಈ ಬಗ್ಗೆ ದೂರು ನೀಡಿದ ಬಳಿಕ ಸುಮಾರು 20 ನಿಮಿಷ ಕಳೆದ ನಂತರ ಪೆಟ್ರೋಲ್ ಬಂಕ್ ಗೆ ವಿದ್ಯುತ್ ಸಂಪರ್ಕ ಮತ್ತೆ ಕಲ್ಪಿಸಲಾಗಿದೆ.

ಈ ಕುರಿತು ಪೆಟ್ರೋಲ್ ಪಂಪ್ ಮಾಲಕರು ಪೊಲೀಸ್ ದೂರು ದಾಖಲಿಸಿದ್ದಾರೆ. ಲೈನ್ ಮ್ಯಾನ್ ವಿದ್ಯುತ್ ಕಡಿತಗೊಳಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ʼಲೈನ್ ಮ್ಯಾನ್ ಹೆಲ್ಮೆಟ್ ಧರಿಸದೆ ಬಂದಾಗ, ನಾವು ಅವರ ಬೈಕ್ ಗೆ ಇಂಧನ ತುಂಬಲು ನಿರಾಕರಿಸಿದ್ದೇವೆ. ಈ ವೇಳೆ ಅವರು ಕೋಪದಿಂದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ ಎಂದು ಪೆಟ್ರೋಲ್ ಪಂಪ್ ನ ಸಿಬ್ಬಂದಿಯೋರ್ವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News