ಕೆಂಪು ಕೋಟೆ ದಾಳಿ ಪ್ರಕರಣ | ಪಾಕಿಸ್ತಾನದ ದೋಷಿಗೆ ಕ್ಷಮಾಧಾನ ನೀಡಲು ರಾಷ್ಟ್ರಪತಿ ನಕಾರ

Update: 2024-06-12 16:02 GMT

ಕೆಂಪು ಕೋಟೆ | PC : PTI 

ಹೊಸದಿಲ್ಲಿ:  ಸುಮಾರು 24 ವರ್ಷ ಹಳೆಯ ಕೆಂಪು ಕೋಟೆ ದಾಳಿ ಪ್ರಕರಣದ ದೋಷಿಯಾಗಿರುವ ಪಾಕಿಸ್ತಾನದ ಭಯೋತ್ಪಾದಕ ಮುಹಮ್ಮದ್ ಆರಿಫ್ ಆಲಿಯಾಸ್ ಅಸ್ಫಾಕ್ ಸಲ್ಲಿಸಿದ ಕ್ಷಮಾಪಣಾ ಅರ್ಜಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಿರಸ್ಕರಿಸಿದ್ದಾರೆ.

2022 ಜುಲೈ 25ರಂದು ಅಧಿಕಾರ ಸ್ವೀಕರಿಸಿದ ಬಳಿಕ ಅವರ ತಿರಸ್ಕರಿಸುತ್ತಿರುವ 2ನೇ ಕ್ಷಮಾದಾನ ಅರ್ಜಿ ಇದಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಕೆಂಪು ಕೋಟೆ ಮೇಲೆ ದಾಳಿ ನಡೆಸಿದ್ದ ಪ್ರಕರಣದಲ್ಲಿ ಅಶ್ಫಕ್ ಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಇದನ್ನು ಮರು ಪರಿಶೀಲಿಸುವಂತೆ ಅಶ್ಫಕ್ ಸಲ್ಲಿಸಿದ ಅರ್ಜಿಯನ್ನು 2022 ನವೆಂಬರ್ 3ರಂದು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.

ಆರೀಫ್ನ ಕ್ಷಮಾಪಣಾ ಅರ್ಜಿಯನ್ನು ಮೇ 15ರಂದು ಸ್ವೀಕರಿಸಲಾಗಿತ್ತು. ಇದನ್ನು ಮೇ 27ರಂದು ರಾಷ್ಟ್ರಪತಿ ಅವರು ತಿರಸ್ಕರಿಸಿದರು ಎಂದು ರಾಷ್ಟ್ರಪತಿ ಅವರ ಕಾರ್ಯಾಲಯದ ಮೇ 29ರ ಆದೇಶವನ್ನು ಉಲ್ಲೇಖಿಸಿ ಅಧಿಕಾರಿಗಳು ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News