ರಾಜ್ಯದ ಗ್ರಾಮೀಣ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಕೇಂದ್ರದಿಂದ 448 ಕೋಟಿ ರೂ. ಬಿಡುಗಡೆ
Update: 2024-11-22 17:14 GMT
ಹೊಸದಿಲ್ಲಿ : ಕೇಂದ್ರ ಸರಕಾರ ಈ ವಿತ್ತ ವರ್ಷದಲ್ಲಿ ಕರ್ನಾಟಕದ ಗ್ರಾಮೀಣ ಸ್ಥಳೀಯಾಡಳಿತ ಸಂಸ್ಥೆಗಳಿಗೆ 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಮೊದಲ ಕಂತು 448.29 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದೆ.
ಈ ಅನುದಾನ ಕರ್ನಾಟಕದ ಎಲ್ಲಾ ಅರ್ಹ 5,949 ಗ್ರಾಮ ಪಂಚಾಯತ್ಗಳಿಗೆ ಹಂಚಿಕೆಯಾಗಲಿದೆ ಎಂದು ಅದು ಶುಕ್ರವಾರ ಅಧಿಕೃತ ಹೇಳಿಕೆ ತಿಳಿಸಿದೆ.
ಕೇಂದ್ರ ಸರಕಾರ ಪಂಚಾಯತ್ ರಾಜ್ ಸಚಿವಾಲಯ ಹಾಗೂ ಜಲ ಶಕ್ತಿ ಸಚಿವಾಲಯ (ಕುಡಿಯುವ ನೀರು ಹಾಗೂ ನೈರ್ಮಲ್ಯೀಕರಣ ಇಲಾಖೆ) ದ ಮೂಲಕ ಗ್ರಾಮೀಣ ಸ್ಥಳೀಯಾಡಳಿತ ಸಂಸ್ಥೆಗಳಿಗೆ 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆ ಮಾಡಲು ಶಿಫಾರಸು ಮಾಡುತ್ತದೆ. ಹಣಕಾಸು ಸಚಿವಾಲಯ ಈ ಅನುದಾನವನ್ನು ಮಂಜೂರು ಮಾಡುತ್ತದೆ. ಮಂಜೂರಾದ ಅನುದಾನ ಈ ವಿತ್ತ ವರ್ಷದಲ್ಲಿ ಎರಡು ಕಂತುಗಳಲ್ಲಿ ಬಿಡುಗಡೆಯಾಗುತ್ತದೆ.