ಉದ್ಯಮ ಸಮೂಹದಿಂದ ಅಯೋಧ್ಯೆಯಲ್ಲಿ ಭೂ ಕಬಳಿಕೆ: ಸಮಾಜವಾದಿ ಪಕ್ಷ ಆರೋಪ

Update: 2024-09-16 06:20 GMT

ಅಖಿಲೇಶ್ ಯಾದವ್ (Photo: PTI) 

ಲಕ್ನೋ: ಉದ್ಯಮ ಸಮೂಹವೊಂದು ಅಯೋಧ್ಯೆಯ ಅತ್ಯಂತ ಹಿಂದುಳಿದ ಮಾಂಜಿ ಸಮಾಜದ ಬಹುತೇಕ ಭೂಮಿಯನ್ನು ಕಬಳಿಕೆ ಮಾಡಿದೆ ಎಂದು ಸಮಾಜವಾದಿ ಪಕ್ಷ ಗಂಭೀರ ಆರೋಪ ಮಾಡಿದೆ. ಜತೆಗೆ ಗೂಂಡಾಗಳು ಗೂಂಡಾಗಿರಿ ಮೂಲಕ ರೈತರನ್ನು ಬೆದರಿಸುತ್ತಿದ್ದಾರೆ ಎಂದು ಆಪಾಧಿಸಿದೆ. ಆದರೆ ಈ ಆರೋಪವನ್ನು ವ್ಯಾಪಾರಿ ಸಂಸ್ಥೆ ನಿರಾಕರಿಸಿದೆ.

ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಮತ್ತು ಅವರ ಪಕ್ಷ ಎರಡು ಗುಂಪುಗಳ ನಡುವಿನ ಸಂಘರ್ಷದ ವಿಡಿಯೊ ಪೋಸ್ಟ್ ಮಾಡಿದ ಬಳಿಕ, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಮತ್ತು ಈ ಆರೋಪಗಳು ಸುಳ್ಳು ಎಂದು ಪೊಲೀಸರು ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಅಧಿಕೃತ ಎಕ್ಸ್ ಹ್ಯಾಂಡಲ್‍ನಿಂದ ಎರಡು ವಿಡಿಯೊ ತುಣುಕುಗಳನ್ನು ಪೋಸ್ಟ್ ಮಾಡಲಾಗಿದ್ದು, ಒಂದು ವ್ಯವಹಾರ ಸಂಸ್ಥೆಯ ಉದ್ಯೋಗಿಗಳು ಮತ್ತು ರೈತರ ನಡುವಿನ ಘರ್ಷಣೆಯದ್ದು ಎಂದು ಹೇಳಿದೆ. ಬಳಿಕ ಮತ್ತೊಂದು ಪೋಸ್ಟ್ ನಲ್ಲಿ, ಆದಿತ್ಯನಾಥ್ ಅವರ ಸೂಚನೆ/ ಪಾಲುದಾರಿಕೆ/ಸಂರಕ್ಷಣೆ/ನಿರ್ದೇಶನದ ಮೇರೆಗೆ ದೊಡ್ಡ ಉದ್ದಿಮೆದಾರರು ಬಲವಂತವಾಗಿ ದಲಿತರು/ ಹಿಂದುಳಿದವರು ಮತ್ತು ರೈತರ ಭೂಮಿಯನ್ನು ಅತಿಕ್ರಮಿಸಿಕೊಳ್ಳುತ್ತಿದ್ದಾರೆ" ಎಂದು ದೂರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News