ಸೋಲನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿದ್ದೇನೆ: ಭಾವುಕರಾದ ಆಪ್‌ ನಾಯಕ ಸೌರಭ್ ಭಾರದ್ವಾಜ್

Update: 2025-02-11 16:32 IST
ಸೋಲನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿದ್ದೇನೆ: ಭಾವುಕರಾದ ಆಪ್‌ ನಾಯಕ ಸೌರಭ್ ಭಾರದ್ವಾಜ್

Screengrab:X/@prawasitv

  • whatsapp icon

ಹೊಸದಿಲ್ಲಿ: ಭಾವುಕರಾಗಿದ್ದಂತೆ ಕಂಡು ಬಂದ ದಿಲ್ಲಿ ಆರೋಗ್ಯ ಸಚಿವ ಹುದ್ದೆಯಿಂದ ನಿರ್ಗಮಿಸುತ್ತಿರುವ ಸೌರಭ್ ಭಾರದ್ವಾಜ್, “ನಾನು ಈ ಸೋಲನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತೇನೆ” ಎಂದು ತಮ್ಮ ಬೆಂಬಲಿಗರನ್ನುದ್ದೇಶಿಸಿ ಗದ್ಗದಿತರಾಗಿ ಹೇಳಿದರು.

ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿನ ಪರಾಭವದ ನಂತರ ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಸೌರಭ್ ಭಾರದ್ವಾಜ್, “ನಾನು ಈ ಸೋಲನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತೇನೆ. ಆದರೆ, ಜನರು ಅಳುತ್ತಿರುವುದನ್ನು ನೋಡಿದಾಗ, ನಾನೂ ಕೂಡಾ ಭಾವುಕನಾಗುತ್ತೇನೆ” ಎಂದು ಹೇಳಿದರು.

“ನಾವೆಲ್ಲರೂ ಕಠಿಣವಾಗಿ ಕೆಲಸ ಮಾಡಿದ್ದೇವೆ ಹಾಗೂ ನಾನು ನಿಮ್ಮೆಲ್ಲರ ಬಗ್ಗೆ ಅಪಾರ ಹೆಮ್ಮೆ ಹೊಂದಿದ್ದೇನೆ” ಎಂದು ಅವರು ತಮ್ಮ ಬೆಂಬಲಿಗರನ್ನುದ್ದೇಶಿಸಿ ಹೇಳಿದರು.

ಸಚಿವ ಹುದ್ದೆಯಿಂದ ನಿರ್ಗಮಿಸುತ್ತಿರುವ ಸೌರಭ್ ಭಾರದ್ವಾಜ್ ಭಾವುಕರಾಗಿ ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಒಂದು ಹಂತದಲ್ಲಿ ಅವರು ತಮ್ಮನ್ನು ತಾವು ಸಂತೈಸಿಕೊಳ್ಳಲು ಮೈಕ್ರೋಫೋನ್ ನಿಂದ ದೂರ ಸರಿದಿರುವುದು ಈ ವಿಡಿಯೊದಲ್ಲಿ ಸೆರೆಯಾಗಿದೆ. ನನ್ನ ಬೆಂಬಲಿಗರು ಭಾವುಕವಾಗಿರುವುದನ್ನು ನೋಡಿ ನನಗೆ ತೀವ್ರ ನೋವಾಗಿದೆ ಎಂದು ಅವರು ಹೇಳುತ್ತಿರುವುದೂ ಆ ವಿಡಿಯೊದಲ್ಲಿ ದಾಖಲಾಗಿದೆ.

ಗ್ರೇಟರ್ ಕೈಲಾಶ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸೌರಭ್ ಭಾರದ್ವಾಜ್, ಬಿಜೆಪಿ ಅಭ್ಯರ್ಥಿ ಶಿಖಾ ರಾಯ್ ವಿರುದ್ಧ 3,188 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು. ಶಿಖಾ ರಾಯ್ 49,594 ಮತಗಳನ್ನು ಪಡೆದರೆ, ಸೌರಭ್ ಭಾರದ್ವಾಜ್ 46,606 ಮತಗಳನ್ನು ಗಳಿಸಿದ್ದರು. ಕೇವಲ 6,711 ಮತಗಳನ್ನು ಪಡೆದ ಕಾಂಗ್ರೆಸ್ ಅಭ್ಯರ್ಥಿ ಗರ್ವಿತ್ ಸಿಂಘ್ವಿ ಮೂರನೆಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News