ಅಜಿತ್ ಪವಾರ್ ಸಹಿತ 39 ಬೆಂಬಲಿಗರ ಅನರ್ಹತೆಗೆ ಶರದ್ ಪವಾರ್ ಬಣ ಒತ್ತಾಯ

Update: 2023-09-09 03:16 GMT

ಅಜಿತ್ ಪವಾರ್-ಶರದ್ ಪವಾರ್, Photo: PTI

ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಎಂಟು ಮಂದಿ ಸಚಿವರನ್ನು ಅನರ್ಹಗೊಳಿಸುವಂತೆ ಪಕ್ಷದ ನಾಯಕ ಶರದ್ ಪವಾರ್ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ. ಜತೆಗೆ ಅಜಿತ್ ಪವಾರ್ ಅವರನ್ನು ಬೆಂಬಲಿಸುತ್ತಿರುವ 31 ಶಾಸಕರನ್ನು ಕೂಡಾ ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಜಿತ್ ಅವರನ್ನು ಬೆಂಬಲಿಸುತ್ತಿರುವ ಶಾಸಕರಲ್ಲಿ ನಾಲ್ವರು ವಿಧಾನ ಪರಿಷತ್ ಸದಸ್ಯರೂ ಸೇರಿದ್ದಾರೆ ಎಂದು ಹೇಳಲಾಗಿದೆ.

"ಶರದ್ ಪವಾರ್ ನಾಯಕತ್ವದಲ್ಲಿ ಯಾವುದೇ ವಿಭಜನೆ ಇಲ್ಲ ಎನ್ನುವುದು ನಮ್ಮ ನಂಬಿಕೆ. ಅಜಿತ್ ಪವಾರ್ ಮತ್ತು ಇತರ ಎಂಟು ಮಂದಿ ಸಂಪುಟ ಸಚಿವರು ಹಾಗೂ ಅವರನ್ನು ಬೆಂಬಲಿಸುವ 31 ಮಂದಿ ತೆಗೆದುಕೊಂಡಿರುವ ನಿರ್ಧಾರ ಪಕ್ಷ ವಿರೋಧಿ ಚಟುವಟಿಕೆ. ಆದ್ದರಿಂದ ಸಂವಿಧಾನದ 10ನೇ ಶೆಡ್ಯೂಲ್ ಅನ್ವಯ ಅವರನ್ನು ಅನರ್ಹಗೊಳಿಸಬೇಕು ಎಂದು ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ.

ಇವರ ಬಣವನ್ನು ಪ್ರತ್ಯೇಕ ಎಂದು ಘೋಷಿಸುವಂತೆ ಎನ್ ಸಿಪಿ ಇದುವರೆಗೆ ಯಾವುದೇ ಪತ್ರ ಬರೆದಿಲ್ಲ ಎಂದು ಸ್ಪೀಕರ್ ರಾಹುಲ್ ನಾರ್ವೇಕರ್ ಸ್ಪಷ್ಟಪಡಿಸಿದ್ದಾರೆ.

ಅಜಿತ್ ಪವಾರ್ ಬಣ ಜೂನ್ 30ರಂದು ಚುನಾವಣಾ ಆಯೋಗದ ಮುಂದೆ ಅರ್ಜಿ ಸಲ್ಲಿಸಿದ್ದಕ್ಕೆ ಪ್ರತಿಯಾಗಿ ಗುರುವಾರ ಆಯೋಗಕ್ಕೆ 500 ಪುಟಗಳ ಪತ್ರ ಬರೆಯಲಾಗಿದೆ ಎಂದು ಎನ್ಸಿಪಿ ಮುಖಂಡ ಹೇಳಿದ್ದಾರೆ. ಅಜಿತ್ ಪವಾರ್, ಆಯೋಗಕ್ಕೆ ಬರೆದ ಪತ್ರದಲ್ಲಿ ತಮ್ಮನ್ನು ಎನ್ ಸಿಪಿ ಅಧ್ಯಕ್ಷ ಎಂದು ಘೋಷಿಸುವಂತೆ ಹಾಗೂ ಪಕ್ಷದ ಗಡಿಯಾರದ ಚಿಹ್ನೆ ನೀಡುವಂತೆ ಮನವಿ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News